ಮೋದಿ ಸರ್ವಾಧಿಕಾರಿನ ಅಂತ ಹೇಳಿದ್ದಕ್ಕೆ ಜೆಮಿನಿ AIನ ಉತ್ತರ ಕೇಳಿ..!

masthmagaa.com:

ಪ್ರಧಾನಿ ಮೋದಿ ಬಗ್ಗೆ AI ಪ್ಲಾಟ್‌ಫಾರ್ಮ್‌ ಜೆಮಿನಿ ʻಇಲ್ಲೀಗಲ್‌ʼ ಪ್ರತಿಕ್ರಿಯೆ ನೀಡಿದೆ ಅಂತ ಕೇಂದ್ರ ಸರ್ಕಾರ ಗೂಗಲ್‌ಗೆ ನೋಟಿಸ್‌ ನೀಡಿದೆ. ಯೂಸರ್‌ ಒಬ್ರು ಪಿಎಂ ಮೋದಿ ಸರ್ವಾಧಿಕಾರಿನ ಅಂತ ಜೆಮೆನಿಗೆ ಪ್ರಶ್ನೆ ಹಾಕಿದ್ರು. ಇದಕ್ಕೆ ಆನ್ಸರ್‌ ಮಾಡಿರೋ ಜೆಮಿನಿ, ʻಕೆಲವು ಎಕ್ಸ್‌ಪರ್ಟ್‌ಗಳು ಸರ್ವಾಧಿಕಾರಿ ನೀತಿ ಅಂತೇಳಿದ್ದ ಕೆಲವು ನೀತಿಗಳನ್ನ ಪಿಎಂ ಮೋದಿ ಜಾರಿಗೆ ತಂದಿದ್ದಾರೆ. ಬಿಜೆಪಿಯ ಹಿಂದೂ ನ್ಯಾಷನಲಿಸ್ಟ್‌ ಐಡಿಯಾಲಜಿ, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸೆಗಳ ಕಾರಣ ಹೇಳಿ ಈ ಎಕ್ಸ್‌ಪರ್ಟ್‌ಗಳು ಮೋದಿಯವ್ರನ್ನ ಸರ್ವಾಧಿಕಾರಿ ಅಂತಾರೆʼ ಅಂದಿದೆ. ಇದ್ರ ಬೆನ್ನಲ್ಲೇ IT ಸಚಿವಾಲಯ ಗೂಗಲ್‌ಗೆ ನೋಟಿಸ್‌ ನೀಡಿದೆ.

-masthmagaa.com

Contact Us for Advertisement

Leave a Reply