ಸ್ಪೇಸ್‌ ಟೂರ್‌ ಮಾಡಲಿರೋ ಮೊದಲ ಭಾರತೀಯ ʻಗೋಪಿ ತೋಟಕೂರʼ!

masthmagaa.com:

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವ್ರ ಬ್ಲೂ ಒರಿಜಿನ್‌ ಏರೋಸ್ಪೇಸ್‌ ಕಂಪನಿಯ ʻನ್ಯೂ ಶೆಫರ್ಡ್‌-25ʼ ಅಥ್ವಾ ʻNS-25ʼ ಮಿಷನ್‌ ಮೂಲಕ ಇದೀಗ ಭಾರತೀಯರೊಬ್ರು ಸ್ಪೇಸ್‌ ಟೂರ್‌ ಮಾಡಲಿದ್ದಾರೆ. ಪೈಲಟ್‌ ಆಗಿ ಕೆಲಸ ಮಾಡ್ತಿರೋ ಆಂಧ್ರ ಪ್ರದೇಶದ ಗೋಪಿ ತೋಟಕೂರ ಅನ್ನೋರು ಐವರು ಸ್ಪೇಸ್‌ ಟೂರಿಸ್ಟ್‌ಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣ ಬೆಳಸಲಿದ್ದಾರೆ. ಈ ಮೂಲಕ ಒಬ್ಬ ಟೂರಿಸ್ಟ್‌ ಆಗಿ ಬಾಹ್ಯಾಕಾಶಕ್ಕೆ ಹಾರೋ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ನು ಈ ಸ್ಪೇಸ್‌ ಟೂರಿಸಂ ಕೈಗೊಳ್ಳೋ ಸ್ಪೇಸ್‌ ಫ್ಲೈಟ್‌ ಯಾವಾಗ ಲಾಂಚ್‌ ಆಗುತ್ತೆ ಅನ್ನೋ ಮಾಹಿತಿ ಶೀಘ್ರದಲ್ಲೇ ನೀಡ್ತೀವಿ ಅಂತ ಬ್ಲೂ ಒರಿಜಿನ್‌ ಸಂಸ್ಥೆ ತಿಳಿಸಿದೆ. ಅಂದ್ಹಾಗೆ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾ ಅವ್ರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ. ಇವ್ರು ವೃತ್ತಿಪರ ಗಗನಯಾತ್ರಿಯಾಗಿ ಸ್ಪೇಸ್‌ಗೆ ಪ್ರಯಾಣ ಮಾಡಿದ್ರು. ಆದ್ರೆ ಈಗ ಗೋಪಿ ತೋಟಕೂರ ಅವ್ರು ಟೂರಿಸ್ಟ್‌ ಆಗಿ ಬಾಹ್ಯಾಕಾಶದತ್ತ ಸಾಗಲಿದ್ದಾರೆ.

-masthmagaa.com

Contact Us for Advertisement

Leave a Reply