ಮದ್ವೆ ವಯಸ್ಸು 18ರಿಂದ 21ಕ್ಕೆ ಏರಿಕೆ ವಿಚಾರ: ಪರ ವಿರೋಧ ಚರ್ಚೆ

masthmagaa.com:

ಹೆಣ್ಣುಮಕ್ಕಳ ಮದ್ವೆ ವಯಸ್ಸನ್ನ 18ರಿಂದ 21ಕ್ಕೆ ಏರಿಸೋ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವಾಗಲೇ ಅದರ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿವೆ. ಈ ಬಗ್ಗೆ ಮಾತನಾಡಿರೋ ಸಮಾಜವಾದಿ ಪಕ್ಷದ ಸಂಸದ ಸೈಯದ್​ ತುಫಾಲಿ ಹಸನ್​, ಹೆಣ್ಣುಮಕ್ಕಳು ಫರ್ಟಿಲಿಟಿ ಏಜ್​ಗೆ ಬಂದ ತಕ್ಷಣ ಮದ್ವೆಯಾಗಬೇಕು. ಪ್ರೌಡಾವಸ್ಥೆಗೆ ಬಂದ ಹೆಣ್ಣುಮಕ್ಕಳು 16ನೇ ವಯಸ್ಸಿಗೆ ಮದ್ವೆಯಾದ್ರೆ ಯಾವ್ದೇ ತಪ್ಪಿಲ್ಲ. ಆಕೆ 18 ವರ್ಷಕ್ಕೆ ವೋಟ್​ ಹಾಕ್ಬೋದು ಅಂದ್ರೆ, ಆ ಏಜ್​​ನಲ್ಲಿ ಯಾಕೆ ಮದ್ವೆಯಾಗ್ಬಾರ್ದು? ಅಂತ ಪ್ರಶ್ನೆ ಮಾಡಿದ್ದಾರೆ. ಅದೇ ಸಮಾಜವಾದಿ ಪಕ್ಷದ ಮತ್ತೊಬ್ಬ ಸಂಸದ ಶಫಿಕುರ್​ ರೆಹಮಾನ್ ಬರ್ಕ್​​ ಮಾತನಾಡಿ, ಭಾರತ ಬಡ ದೇಶ. ಹೀಗಾಗಿ ತಮ್ಮ ಮಗಳು ಆದಷ್ಟು ಬೇಗ ಮದ್ವೆಯಾಗಿ ಹೋಗಲಿ ಅಂತ ಬಯಸುತ್ತಾರೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply