ಸಿಎಂ ಬಸವರಾಜ ಬೊಮ್ಮಾಯಿಯವರ ಕ್ಷೇತ್ರದಲ್ಲಿ ಮಸ್ತ್‌ ಮಗಾ ತಂಡ! ಹೇಗಿದೆ ಜನ ಮತ ಮಿಡಿತ?

masthmagaa.com:

ಹಾವೇರಿ ರಾಜ್ಯದ ಪ್ರಮುಖ ಜಿಲ್ಲೆ. ಉತ್ತರದ ಬೀದರ ಮತ್ತು ದಕ್ಷಿಣದ ಕೊಳ್ಳೆಗಾಲ ಈ ಜಿಲ್ಲೆಗೆ ಸಮಾನ ಅಂತರದಲ್ಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಜಿಲ್ಲೆ ಅಂತ ಹಾವೇರಿ ಜಿಲ್ಲೆಯನ್ನ ಕರೀತಾರೆ. ಸಂತ ಶಿಶುನಾಳ ಶರೀಫರು, ಭಕ್ತಶ್ರೇ಼ಷ್ಟ ಕನಕದಾಸರು, ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಜಿಲ್ಲೆ ಹಾವೇರಿ. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯವರು. ಹೀಗೆ ಐತಿಹಾಸಿಕವಾಗಿ ಸಾಂಸ್ಕೃತಿಯವಾಗಿ ಅತ್ಯಂತ ಶ್ರೀಮಂತವಾಗಿರೋ ಹಾವೇರಿ ರಾಜ್ಯ ರಾಜಕೀಯದಲ್ಲೂ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ಜಿಲ್ಲೆ. ಈಗಂತೂ ರಾಜ್ಯ ರಾಜಕೀಯದಲ್ಲಿ ಹಾವೇರಿ ತುಂಬಾ ಇಂಪಾರ್ಟೆಂಟ್‌ ರೋಲ್‌ ನಿಭಾಯಿಸ್ತಿದೆ. ಯಾಕಂದ್ರೆ ಸಧ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡ್ತಿರೋ ಸಿಎಂ ಬೊಮ್ಮಾಯಿಯವರು, ಕೃಷಿ ಮಂತ್ರಿ ಬಿಸಿ ಪಾಟೀಲರು ಇದೇ ಜಿಲ್ಲೆಯ ಪ್ರತಿನಿಧಿ. ಹೀಗಾಗಿ ತುಂಬಾ ಪ್ರಮುಖವಾಗುತ್ತೆ ರಾಜ್ಯರಾಜಕಾರಣಕ್ಕೆ. ಇನ್ನು ಹಾವೇರಿಯಲ್ಲಿ ಸಧ್ಯ ಆರು ವಿಧಾನಸಭಾ ಕ್ಷೇತ್ರಗಳಿವೆ.

1)ಹಾವೇರಿ,
2)ಹಾನಗಲ್,
3)ರಾಣೆಬೆನ್ನೂರು,
4)ಹಿರೆಕೇರೂರು.
5)ಬ್ಯಾಡಗಿ,
6)ಶಿಗ್ಗಾಂವ

ಶಿಗ್ಗಾಂವ ವಿಧಾನಸಭಾ ಕ್ಷೇತ್ರ

ಎಲ್ರಿಗೂ ಗೊತ್ತಿರೋ ಹಾಗೇ ಇದು ಕರ್ನಾಟಕದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ಕ್ಷೇತ್ರ ಇದು. ಅಷ್ಟೇ ಅಲ್ಲ ಈ ಹಿಂದೆ ಎಸ್‌ ನಿಜಲಿಂಗಪ್ಪ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸಿಎಂ ಕೂಡ ಆಗಿದ್ದರು. ಹೀಗಾಗಿ ರಾಜ್ಯಕ್ಕೆ ಎರಡು ಸಿಎಂಗಳನ್ನ ಕೊಟ್ಟ ಕ್ಷೇತ್ರ ಇದು. 2008ರಿಂದ ಇಲ್ಲಿ ತನಕ ಬಸವರಾಜ ಬೊಮ್ಮಾಯಿಯವರೇ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಬೊಮ್ಮಾಯಿಗೆ ಕಾಂಗ್ರೆಸ್‌ ಪ್ರಬಲವಾದ ಫೈಟ್‌ ಕೂಡ ಕೊಡ್ತಿದೆ.
ಕಳೆದ ಅಂದ್ರೆ 2018ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿಯವರು 83,868 ಮತಗಳನ್ನು ಪಡೆದ್ರೆ ಕಾಂಗ್ರೆಸ್‌ನ ಸೈಯದ್‌ ಅಜ್ಜಂಪೀರ್‌ ಖಾದ್ರಿ 74,603 ಪಡೆದು ಬೊಮ್ಮಾಯಿಗೆ ಟೆನ್ಷನ್ ಕೊಟ್ಟಿದ್ರು. ಆದ್ರೆ ಅಂತಿಮವಾಗಿ ಬಸವರಾಜ ಬೊಮ್ಮಾಯಿ ವಿನ್‌ ಆದ್ರು.

2023ರ ಅಭ್ಯರ್ಥಿಗಳ
ಬಿಜೆಪಿ – ಸಿಎಂ ಬೊಮ್ಮಾಯಿ
ಕಾಂಗ್ರೆಸ್‌ – ಮೊಹಮ್ಮದ್ ಯೂಸೂಫ್ ಸವಣೂರು
ಜೆಡಿಎಸ್‌ – ?
ಆಮ್‌ ಆದ್ಮಿ ಪಕ್ಷ –

ಕ್ಷೇತ್ರದಲ್ಲಿ 2,09,629 ಮತದಾರರಿದ್ದಾರೆ. 73% Hindus ಅದ್ರಲ್ಲೂ ಲಿಂಗಾಯತ ಮತಗಳು ಇಲ್ಲಿ ಪ್ರಮುಖ ಸ್ಥಾನವನ್ನ ಹೊಂದಿವೆ, 24% Muslims and 0.08% Christians ಕೂಡ ಇದ್ದಾರೆ.

ಬನ್ನಿ…. ಮತದಾರರರ ಮನಸ್ಸಲ್ಲಿ ಏನಿದೆ ಅನ್ನೋದನ್ನ ಅವರ ಬಾಯಿಂದಲೇ ಕೇಳೋಣ.. ನಾವು ಮಾಡಿರೋ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ!

-masthmagaa.com

Contact Us for Advertisement

Leave a Reply