masthmagaa.com:

ಕೇಂದ್ರ ಸರ್ಕಾರ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಅಧಿಕೃತವಾಗಿ ಜಾರಿಗೊಳ್ಳಲಿದೆ. ಈ ನೀತಿಯು ಸಾರ್ವಜನಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ದಿನಬಳಕೆಯ ಹಾಗೂ ಆಹಾರ ವಸ್ತುಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಿಎಸ್‌ಟಿ ಕೌನ್ಸಿಲ್‌ ಅದಾಗಲೇ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನರಿಗೆ ಗಾಯದ ಮೇಲೆ ಬರೆ ಬೀಳುವುದು ಗ್ಯಾರೆಂಟಿಯಾಗಿದೆ.

ಯಾವುದೆಲ್ಲಾ ದುಬಾರಿ..?
* ಪ್ಯಾಕ್ ಮಾಡಿದ ಆಹಾರ ವಸ್ತು (ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು)
* ಎಲ್ ಇಡಿ ಬಲ್ಬ್, ಎಲ್‌ಇಡಿ ಲ್ಯಾಂಪ್, ಸೋಲಾರ್ ವಾಟರ್ ಹೀಟರ್, ಮುದ್ರಣ ಇಂಕ್,
* ನಿತ್ಯ 1000 ರೂಗಿಂತ ಕಡಿಮೆ ಇರೋ ಹೋಟೆಲ್ ರೂಂಗೂ 12% ಜಿಎಸ್ಟಿ ಜಾರಿ
* ಚೆಕ್ ಬುಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಅಂಚೆ ಇಲಾಖೆ ಬುಕ್ ಪೋಸ್ಟ್
* ನಿತ್ಯ 5000 ರೂ ಹೆಚ್ಚು ಶುಲ್ಕ ಇರುವ ಆಸ್ಪತ್ರೆಯ ಸ್ಪೆಷಲ್ ವಾರ್ಡ್‌ಗೆ 5% GSt ಜಾರಿ (ಐಸಿಯು ಹೊರತುಪಡಿಸಿ)
* ನಿತ್ಯ 5000ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಧಾರ್ಮಿಕ ಕೇಂದ್ರಗಳು, ಮಾಸಿಕ 2500ಕ್ಕೂ ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಜಿಎಸ್‌ಟಿ ಜಾರಿ
* ಬ್ಲಡ್ ಬ್ಯಾಂಕ್, ವಸತಿ ಉದ್ದೇಶಕ್ಕಾಗಿ ಉದ್ಯಮ ಸಂಸ್ಥೆಗಳು ನೀಡಿದ್ದ ವಸತಿ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ರದ್ದು
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನ ಸಾಮಾನ್ಯರಿಗೆ ಈ ನೀತಿಯು ನುಂಗಲಾರದ ಬಿಸಿ ತುಪ್ಪವಾಗಲಿದೆ. ಇವಷ್ಟೇ ಅಲ್ಲದೆ, ಹಾಲು ಉತ್ಪನ್ನಗಳ ಮೇಲೂ ಜಿಎಸ್‌ಟಿ ಜಾರಿಯಾಗಲಿದೆ. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

-masthmagaa.com

Contact Us for Advertisement

Leave a Reply