ಗಿನಿಯಾ-ಬಿಸೌ ಹಿಂಸೆಯ ಹಿಂದೆ ದಂಗೆಯ ಉದ್ಧೇಶ ಇತ್ತಾ?

masthmagaa.com:

ಪಶ್ಚಿಮ ಆಫ್ರಿಕಾದ ಗಿನಿಯಾ-ಬಿಸೌ ದೇಶದಲ್ಲಿ ಕಳೆದ ವಾರ ಭಾರಿ ಹಿಂಸಾಚಾರ ನಡೆದಿತ್ತು. ಇದ್ರ ಬಗ್ಗೆ ಮಾತನಾಡಿರೋ ಅಲ್ಲಿನ ಅಧ್ಯಕ್ಷ ಉಮಾರೋ ಸಿಸೋಕೊ ಎಂಬಾಲೋ ʻಇಲ್ಲಿ ನಡೆದ ಮಾರಣಾಂತಿಕ ಹಿಂಸಾಚಾರದ ಹಿಂದೆ ದಂಗೆ ಏಳುವ ಉದ್ದೇಶ ಇತ್ತುʼ ಅಂದಿದ್ದಾರೆ. ಅಲ್ಲದೆ ಹಿಂಸಾಚಾರಕ್ಕೆ ಕಾರಣವಾದೋರು ಸೀರಿಯಸ್‌ ಪರಿಣಾಮಗಳನ್ನ ಎದುರಿಸ್ಬೇಕಾಗತ್ತೆ ಅಂತ ಎಂಬಾಲೋ ಎಚ್ಚರಿಸಿದ್ದಾರೆ . ಅಂದ್ಹಾಗೆ 1974ರಲ್ಲಿ ಪೋರ್ಚುಗೀಸರಿಂದ ಸ್ವಾತಂತ್ರ್ಯ ಪಡೆದ ಗಿನಿಯಾ-ಬಿಸೌ ದೇಶ ಆಲ್ಮೋಸ್ಟ್‌ 50 ವರ್ಷಗಳಲ್ಲಿ ಹಲವಾರು ಧಂಗೆಗಳನ್ನ ಕಂಡಿದೆ. ಕಳೆದ ವಾರ ಕೂಡ ಅಲ್ಲಿನ ರಾಷ್ಟ್ರೀಯ ರಕ್ಷಣಾ ದಳ ಹಾಗೂ ರಾಷ್ಟ್ರಪತಿಗಳಿಗೆ ರಕ್ಷಣೆ ಒದಗಿಸೋ ವಿಶೇಷ ಪಡೆಗಳ ನಡುವೆ ಅಶಾಂತಿ ಭುಗಿಲೆದ್ದು ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು.

-masthmgaaa.com

Contact Us for Advertisement

Leave a Reply