ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಗುಜರಾತ್​ನ ಧೊಲವಿರ..

masthmagaa.com:

ಗುಜರಾತ್ ನ ಧೊಲವಿರವನ್ನ ಯುನೆಸ್ಕೋ ತನ್ನ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಗುಜರಾತ್ ನ ರಣ್ ಆಫ್ ಕಚ್ ನಲ್ಲಿ ಈ ಜಾಗ ಇದೆ. ಇದು ಹರಪ್ಪ ನಾಗರಿಕತೆ ಹರಡಿದ್ದ ಪ್ರದೇಶ. ಇಲ್ಲಿ ಕ್ರಿಸ್ತಪೂರ್ವ 2500 ವರ್ಷಗಳಷ್ಟು ಹಿಂದಿನ ನಾಗರಿಕತೆಯ ಗುರುತುಗಳು ಸಿಕ್ಕಿವೆ. ಆಗಿನ ಕಾಲದಲ್ಲೇ ತುಂಬಾ ಪ್ಲಾನ್ಡ್ ಆಗಿ ಕಟ್ಟಿದ್ದ ನಗರಗಳು, ಮೆಟ್ಟಿಲುಗಳಿದ್ದ ನೀರಿನ ಟ್ಯಾಂಕ್ ಗಳು, ನಗರದ ದ್ವಾರಗಳು ಪತ್ತೆಯಾಗಿವೆ. ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಇನ್ನೂ ಈ ಭಾಗದಲ್ಲಿ ಉತ್ಖನನ ಹಾಗು ಅಧ್ಯಯನ ಮುಂದುವರಿಸಿದೆ. ಅಂದಹಾಗೆ ಈಗಿನ ಪಾಕಿಸ್ತಾನ ಹಾಗೂ ಭಾರತದ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣದ ಪ್ರದೇಶದಲ್ಲಿ ಕ್ರಿಸ್ತ ಪೂರ್ವ 2500ರ ವೇಳೆ, ಅಂದ್ರೆ ಈಗಿನಿಂದ ಆಲ್ಮೋಸ್ಟ್ 4500 ವರ್ಷಗಳಿಗೂ ಮೋದಲೇ.., ಮುಂದುವರಿದ ಹರಪ್ಪ ನಾಗರಿಕತೆ ಇತ್ತು ಅನ್ನೋದಕ್ಕೆ ಅನೇಕ ಸಾಕ್ಷ್ಯಗಳು ಸಿಕ್ಕಿವೆ.

-masthmagaa.com

Contact Us for Advertisement

Leave a Reply