2 ಬಾರಿ ಫೈನ್‌! ನಿಧಾನವೇ ಗೊತ್ತಿರಲಿಲ್ಲ! ಪಂತ್‌ ಸ್ಪೀಡ್‌ ಟ್ರಬಲ್‌!

masthmagaa.com:

ಉತ್ತರಾಖಂಡದ ರೂರ್ಕಿಯಲ್ಲಿ ನಡೆದ ಭೀಕರ ಅಪಘಾತ ದಲ್ಲಿ ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು, ಡೆಹ್ರಡೂನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತೀದಾರೆ. ಅಗತ್ಯ ಬಿದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮೂಲಕ ಪಂತ್‌ರನ್ನ ದೆಹಲಿಗೆ ಶಿಫ್ಟ್‌ ಮಾಡಲಾಗುತ್ತೆ ಅಂತ Delhi & District Cricket Association ಡೈರಕ್ಟರ್‌ ಶ್ಯಾಮ್‌ ಶರ್ಮಾ ಹೇಳಿದ್ದಾರೆ. ಇನ್ನು ಅಪಘಾತದಲ್ಲಿ ಹಣೆ, ಕಾಲು ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿರೋದ್ರಿಂದ ಪಂತ್‌ಗೆ ಪ್ಲಾಸ್ಟಿಕ್‌ ಸರ್ಜರಿ ಮಾಡೋ ಸಾಧ್ಯತೆ ಇದೆ ಅಂತ ಶರ್ಮಾ ಹೇಳಿದ್ದಾರೆ. ಇತ್ತ ಅಪಘಾತವಾದ ಸಮಯದಲ್ಲಿ ನೋವಿನಿಂದ ನರಳುತ್ತಿದ್ದ ಪಂತ್‌ಗೆ ಸಹಾಯ ಮಾಡಿದ್ದ ಬಸ್‌ ಡ್ರೈವರ್‌ ಮತ್ತು ಕಂಡಕ್ಟರ್‌ ಇಬ್ಬರನ್ನೂ ಹರಿಯಾಣ ರಾಜ್ಯ ಸಾರಿಗೆ ಗೌರವಿಸಿದೆ. ಇತ್ತ ಪ್ರಧಾನಿ ಮೋದಿ ಅವ್ರು ಟ್ವೀಟ್‌ ಮಾಡೋ ಮೂಲಕ ಪಂತ್‌ ಶೀಘ್ರ ಗುಣಮುಖರಾಗಲಿ ಅಂತ ಪ್ರಾರ್ಥಿಸಿದ್ದಾರೆ. ಜೊತೆಗೆ ಪಂತ್‌ ಅವ್ರ ತಾಯಿಗೆ ಕರೆ ಮಾಡಿ, ಪಂತ್‌ರ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ರಿಷಭ್‌ ಅವ್ರು ಬೇಗ ಗುಣಮುಖರಾಗಿ ಬರಲಿದ್ದಾರೆ ಅದಕ್ಕೆ ಬೇಕಾದ ಅಗತ್ಯ ರೀತಿಯ ಎಲ್ಲಾ ಸಹಕಾರಗಳನ್ನ ನೀಡಲಾಗುವುದು ಅಂತ ಮೋದಿ ಹೇಳಿದ್ದಾರೆ. ಪಂತ್‌ರ ಕಾರಿನ ಅಪಘಾತಕ್ಕೆ ಅತಿ ವೇಗವೇ ಕಾರಣ ಅಂತ ತಿಳಿದು ಬಂದಿದೆ. ಪಂತ್‌ ಇದೇ ಮೊದಲ ಬಾರಿಗೆ ಅತಿ ವೇಗದಲ್ಲಿ ಕಾರ್‌ ಓಡಿಸಿಲ್ಲ.. ಈ ಹಿಂದೆ ಎರಡು ಬಾರಿ ಸ್ಪೀಡ್‌ ಆಗಿ ಕಾರ್‌ ಓಡಿಸಿದ್ದಕ್ಕೆ ಪೊಲೀಸರು ದಂಡವನ್ನ ವಿಧಿಸಿದ್ರು ಅನ್ನೋದು ಗೊತ್ತಾಗಿದೆ. ಇನ್ನೊಂದ್‌ ಕಡೆ ಇಂಟರ್‌ವ್ಯೂ ಒಂದ್ರ ಪಂತ್‌ರ ವಿಡಿಯೋವೊಂದು ವೈರಲ್‌ ಆಗಿದೆ. ಪಂತ್‌ ಶಿಖರ್‌ ಧವನ್‌ರನ್ನ, ನನಗೆ ಏನು ಸಲಹೆ ನೀಡೋಕೆ ಬಯಸ್ತೀರಿ ಅಂತ ಕೇಳಿದ್ರು. ಇದಕ್ಕೆ ಮಾತನಾಡಿದ ಶಿಖರ್‌ ಧವನ್ ʻನಿಧಾನವಾಗಿ ಕಾರ್‌ ಓಡಿಸಿ ಅಂತ ಸಲಹೆ ನೀಡಿದ್ದಾರೆ. ಇದು ಮೂರು ವರ್ಷಗಳ ಹಿಂದಿನ ವಿಡಿಯೋವಾಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇತ್ತ ಈ ಅಪಘಾತ ನಡೆದ ಒಂದು ನಿಮಿಷದ ಒಳಗಡೆನೆ ಕಾರ್‌ ಸಂಪೂರ್ಣ ಸುಟ್ಟಿದ್ದು, ಇದರ ಪರಿಶೀಲನೆ ಮಾಡೋಕೆ ಮರ್ಸಿಡೆಸ್‌ ಕಾರ್‌ನ ಎಕ್ಸ್ಪರ್ಟ್‌ಗಳೇ ಬರ್ಬೇಕು ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply