ಹಾಸನದಲ್ಲಿಂದು ಶತಕ ಬಾರಿಸಿದ ಕೊರೋನಾ ವೈರಸ್.. ಇಬ್ಬರು ಬಲಿ..!

masthmagaa.com:

ಹಾಸನ ಜಿಲ್ಲೆಯಲ್ಲಿ ಇಂದು 137 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,872ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇವತ್ತು 88 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,190 ಆಗಿದೆ. ಸದ್ಯ ಜಿಲ್ಲೆಯಲ್ಲಿ 1,607 ಸಕ್ರಿಯ ಪ್ರಕರಣಗಳಿವೆ.

ಇವತ್ತಿನ ಪ್ರಕರಣಗಳು:

ಹಾಸನ – 82

ಅರಕಲಗೂಡು – 21

ಚನ್ನರಾಯಪಟ್ಟಣ – 10

ಅರಸೀಕೆರೆ – 9

ಹೊಳೆನರಸೀಪುರ – 7

ಬೇಲೂರು – 4

ಸಕಲೇಶಪುರ – 3

ಇತರೆ – 1

-masthmagaa.com

Contact Us for Advertisement

Leave a Reply