ಆರ್ಥಿಕತೆ ಬೆಳವಣಿಗೆ ಸರಾಗ; ಮಾರ್ಕೆಟ್‌ನಲ್ಲಿ ಉಪ್ಪು-ಖಾರವಿಲ್ಲ

Masthmagaa.com:

RBIನ ಮಾನಿಟರ್‌ ಪಾಲಿಸಿ ಕೌನ್ಸಿಲ್‌ ಮೀಟಿಂಗ್‌ ನಂತರ ದೇಶದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ಗಳಾದ ನಿಫ್ಟಿ 50 ಹಾಗೂ ಸೆನ್ಸೆಕ್ಸ್‌ ದಿನದ ಕನಿಷ್ಟ ಮಟ್ಟದಲ್ಲಿ ಟ್ರೇಡಿಂಗ್‌ ಮುಗಿಸಿವೆ. ಸೆನ್ಸೆಕ್ಸ್‌ 724 ಪಾಯಿಂಟ್‌ ಇಳಿಕೆ ಕಂಡು 71,428ರಲ್ಲಿ ದಿನದ ವಹಿವಾಟು ಮುಗಿಸಿದೆ. ನಿಫ್ಟಿ 213 ಪಾಯಿಂಟ್‌ ಇಳಿಕೆ ಕಂಡು 21,718ರಲ್ಲಿ ವಹಿವಾಟು ಮುಗಿಸಿದೆ. ದೇಶದ ಆರ್ಥಿಕತೆಯಲ್ಲಿ ಆರೋಗ್ಯಕರ ಬೆಳವಣಿಗೆಯ ಅಂದಾಜಿನಿಂದಾಗಿ ಮಾರ್ಕೆಟ್‌ ಸೆಂಟಿಮೆಂಟ್‌ಗಳಿಗೆ ಬೂಸ್ಟ್‌ ಸಿಕ್ಕಿಲ್ಲ. ಇನ್ನು ಮೀಟಿಂಗ್‌ ಶುರು ಆಗ್ತಿದ್ದಂಗೆ ಆಕಾಶದ ಕಡೆ ನೋಡ್ತಿದ್ದ ಬ್ಯಾಂಕಿಂಗ್‌ ಶೇರುಗಳು ಮೀಟಿಂಗ್‌ ಮುಗೀತಿದ್ದಂತೆ ಡುಬುಕ್‌ ಅಂತ ಬಿದ್ದಿವೆ. ಇದಕ್ಕೆ ಕಾರಣ RBI ಎಲ್ಲಾ ಬ್ಯಾಂಕ್‌ಗಳಿಗೂ ರೀಟೇಲ್‌ ಹಾಗೂ MSME ಲೋನ್‌ಗಳ ಕೀ ಫ್ಯಾಕ್ಟ್‌ ಸ್ಟೇಟ್‌ಮೆಂಟ್‌(KFS) ಕೊಡ್ಬೇಕು ಅಂತೇಳಿದೆ. ಈ KFS ಅನ್ನೋದು ಕಂಪ್ಲೀಟ್‌ ಸಾಲದ ವಿವರ. ಇದ್ರಲ್ಲಿ ಬ್ಯಾಂಕ್‌ಗಳು ಸಾಲದ ಆಲ್‌-ಇನ್‌-ಕಾಸ್ಟ್‌ ತೋರಿಸ್ಬೇಕಾಗುತ್ತೆ. ಅಂದ್ರೆ ಸಾಲದ ಟ್ರಾನ್ಸಾಕ್ಷನ್‌ ಖರ್ಚು, ಆಪರೇಷನಲ್‌ ಚಾರ್ಜ್‌ ಅದನ್ನ ಯಾರ ಮೇಲೆ ಹೊರಿಸಲಾಗುತ್ತೆ. ಹೀಗೆ ಸಣ್ಣಪುಟ್ಟ ಚಾರ್ಜಸ್‌ನೆಲ್ಲ ಸಾಲ ತಗೊಳೋನಿಗೆ ತೋರಿಸಬೇಕಾಗುತ್ತೆ. ಈ ಮುಂಚೆ KFSನ ಕೆಲ ನಿರ್ಧಿಷ್ಟ ಬ್ಯಾಂಕ್‌ಗಳು ನಿರ್ಧಿಷ್ಟ ಸಾಲಗಳಿಗೆ ಮಾತ್ರ ಕೊಡ್ಬೇಕಿತ್ತು. ಪ್ರೈವೇಟ್‌ ಬ್ಯಾಂಕ್‌ಗಳು
ಇದ್ರಲ್ಲಿ ಸಿಕ್ಕಾಪಟ್ಟೆ ಕಳ್ಳಾಟ ಆಡ್ತಿದ್ವು. ಇಂಥಾ ಲೋನ್‌ಗಳ ಮೇಲೆ ಹಿಡನ್‌ ಚಾರ್ಜ್‌ಗಳನ್ನ ಹಾಕ್ತಿದ್ವು. ಆದ್ರೆ ಈ KFSನ್ನ ಇಂಪ್ಲಿಮೆಂಟ್‌ ಹಾಗೂ ಮೇಂಟೇನ್‌ ಮಾಡೋದ್ರಿಂದ ಬ್ಯಾಂಕ್‌ಗಳಿಗೆ ಹೆಚ್ಚಿನ ಖರ್ಚು ಬೀಳುತ್ತೆ. ಅಲ್ಲದೇ ಅವುಗಳ ಲಾಭಕ್ಕೂ ಹೊಡೆತ ಕೊಡುತ್ತೆ. ಹೀಗಾಗಿ ಇವತ್ತು ಹೂಡಿಕೆದಾರರು ಬ್ಯಾಂಕಿಂಗ್‌ ಷೇರುಗಳನ್ನ ಸಿಕ್ಕಾಪಟ್ಟೆ ಮಾರಿದ್ದಾರೆ. ಹೀಗಾಗಿ ಪ್ರೈವೇಟ್‌ ಬ್ಯಾಂಕ್‌ಗಳ ಷೇರುಗಳು ಬಿದ್ದಿವೆ. ನಿಫ್ಟಿ ಖಾಸಗಿ ಬ್ಯಾಂಕ್‌ ಸೂಚ್ಯಂಕ 3% ಕುಸಿದಿದೆ. ಆದ್ರೆ ಇದ್ರಿಂದ ಪಾರದರ್ಶಕತೆ ಹೆಚ್ಚುತ್ತೆ ಅಂತ RBI ಹೇಳಿದೆ.

-Masthmagaa.com

Contact Us for Advertisement

Leave a Reply