ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಯಲ್ಲೋ ಅಲರ್ಟ್‌ ಘೋಷಿಸಿದ IMD!

masthmagaa.com:

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಮ್ಮ ಕರ್ನಾಟಕದಲ್ಲೂ ವರುಣ ಅಬ್ಬರಿಸ್ತಿದಾನೆ. ರಾಜ್ಯದ ಕರಾವಳಿ ಭಾಗದಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರದವರೆಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಆರೆಂಜ್‌ ಮತ್ತು ಯಲ್ಲೋ ಅಲರ್ಟ್‌ ನೀಡಿದೆ. ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಚುರುಕಾಗಿದ್ದು, ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆ ಆಗ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರದಿ ಪ್ರಕಾರ ಇಂದು ಸಾಧಾರಣದಿಂದ ಭಾರಿ ಮಳೆಯಾಗೋ ನಿರೀಕ್ಷೆಯಿದೆ. ಈ ಮಧ್ಯೆ ಕೇರಳದ ತ್ರಿಶೂರ್‌, ಮಲಪ್ಪುರಂ, ಕಾಸರಗೂಡು, ಕಣ್ಣೂರು, ವಯನಾಡ್‌ ಸೇರಿದಂತೆ 7 ಜಿಲ್ಲೆಗಳಲ್ಲಿ ಭಾನುವಾರ ಹಳದಿ ಅಲರ್ಟ್‌ ಘೋಷಿಸಲಾಗಿದೆ. ನಾಳೆವರೆಗೂ ಕೇರಳದ ವಿವಿಧೆಡೆ ಭಾರಿ ಮಳೆಯಾಗೋ ಸಾಧ್ಯತೆ ಇದೆ. ಇಂದು ಪಶ್ಚಿಮ ರಾಜಸ್ತಾನ ಹಾಗೂ ಪಂಜಾಬ್‌ಗಳಲ್ಲಿ ಲಘು ಮಳೆ ನಿರೀಕ್ಷಿಸಲಾಗಿದೆ. ಮುಂಬರೋ ವಾರದಲ್ಲಿ ಅಂಡಮಾನ್‌ ನೀಕೊಬಾರ್‌ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗೋ ಸಂಭವವಿದೆ. ಇನ್ನೂ ಸ್ಕೈಮೆಟ್‌ ಹವಾಮಾನ ವರದಿ ಪ್ರಕಾರ ಇಂದು ಕರ್ನಾಟಕ, ಕೇರಳ, ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗೋ ನಿರೀಕ್ಷೆಯಿದೆ.

-masthmagaa.com

Contact Us for Advertisement

Leave a Reply