ಸುಪ್ರೀಂ ಮೆಟ್ಟಿಲೇರಿದ ಝಾರ್ಖಂಡ್‌ ಮಾಜಿ ಸಿಎಂ ಹೇಮಂತ್‌!

masthmagaa.com:

ನ್ಯಾಯಾಂಗ ಬಂಧನದಲ್ಲಿರೋ ಝಾರ್ಖಂಡ್‌ನ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್‌ ಸಂಬಂಧ ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿರೋ ಅರ್ಜಿಗೆ ಝಾರ್ಖಂಡ್‌ ಹೈಕೋರ್ಟ್‌, ಫೆಬ್ರುವರಿಯಲ್ಲಿ ತೀರ್ಪು ಕಾಯ್ದಿರಿಸಿತ್ತು. ಇನ್ನೂ ಯಾವ್ದೇ ಆದೇಶ ಹೊರಡಿಸಿಲ್ಲ. ʻಸೋ ಹೀಗಾದ್ರೆ…. ಚುನಾವಣೆ ಮುಗ್ದಿರುತ್ತೆ… ಆದ್ರೆ ಹೇಮಂತ್‌ ಸೊರೇನ್‌ ಮಾತ್ರ ಜೈಲಿನಲ್ಲಿ ಇರ್ತಾರೆʼ ಅಂತ ಹೇಮಂತ್‌ ಸೊರೇನ್‌ ಪರ ವಕೀಲ ಕಪಿಲ್‌ ಸಿಬಲ್‌ ಸುಪ್ರಿಂ ಕೋರ್ಟ್‌ಗೆ ರಿಪೋರ್ಟ್‌ ಸಬ್ಮಿಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply