23 ವಾರಗಳ ಭ್ರೂಣದ ಅಬಾರ್ಷನ್​​ಗೆ ಅನುಮತಿ ಕೊಟ್ಟ ಕೋರ್ಟ್​!

masthmagaa.com:

22 ವರ್ಷದ ಮಹಿಳೆಗೆ 23 ವಾರಗಳ ಭ್ರೂಣವನ್ನು ಅಬಾರ್ಷನ್ ಮಾಡಿಸಲು ಬಾಂಬೆ ಹೈಕೋರ್ಟ್​ ಅನುಮತಿ ನೀಡಿದೆ. ಈ ಮಹಿಳೆ ಕೌಟುಂಬಿಕ ಹಿಂಸೆಯಿಂದ ಬಳಲುತ್ತಿದ್ದು, ಪತಿಯಿಂದ ಡಿವೋರ್ಸ್​ ಪಡೀತಿದ್ದಾರೆ. ಹೀಗಾಗಿ ಭ್ರೂಣವನ್ನು ತೆಗೆಸಲು ಅನುಮತಿ ನೀಡಬೇಕೆಂದು ಕೋರ್ಟ್​ ಮೊರೆಹೋಗಿದ್ರು. ಇವರನ್ನು ಪರಿಶೀಲಿಸಿದ್ದ ವೈದ್ಯರ ತಂಡ ಮಗು ಆರೋಗ್ಯವಾಗಿದೆ. ಆದ್ರೆ ಮಹಿಳೆಯ ಮಾನಸಿಕ ಪರಿಸ್ಥಿತಿ ಚೆನ್ನಾಗಿಲ್ಲ. ಗರ್ಭಿಣಿಯಾಗಿ ಮುಂದುವರಿದ್ರೆ ಮತ್ತಷ್ಟು ಪರಿಸ್ಥಿತಿ ಹದಗೆಡಲಿದೆ ಅಂತ ಹೇಳಿತ್ತು. ಹೀಗಾಗಿ ಕೋರ್ಟ್​ ಅಬಾರ್ಷನ್​​ಗೆ ಅನುಮತಿ ನೀಡಿದೆ. ಅಂದಹಾಗೆ ಸದ್ಯದ ರೂಲ್ಸ್ ಪ್ರಕಾರ 4 ವಾರ ಮೇಲ್ಪಟ್ಟ ಭ್ರೂಣವನ್ನು ತೆಗೆಸುವಂತಿಲ್ಲ.

-masthmagaa.com

Contact Us for Advertisement

Leave a Reply