ಕೋವಿಡ್‌ ಔಷಧಿ ಭಾರತಕ್ಕಿಂತ ಯುರೋಪ್‌ನಲ್ಲಿ ಹೆಚ್ಚು ಪರಿಣಾಮಕಾರಿ!

masthmagaa.com:

ಕೋವಿಡ್‌-19 ಟ್ರೀಟ್‌ಮೆಂಟ್‌ನಲ್ಲಿ ಬಳಸಲಾಗೋ ಡೆಕ್ಸಾಮೆಥಾಸೋನ್‌ (dexamethasone) ಇಂಜೆಕ್ಶನ್‌ ಭಾರತೀಯರಿಗಿಂತ ಯುರೋಪಿಯನ್ನರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಅಂತ ಅಧ್ಯಯನವೊಂದು ಹೇಳಿದೆ. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ ಮೆಡಿಕಲ್‌ ವಿವಿ ಹಾಗೂ ಚೆನ್ನೈನ ಅಪೋಲೋ ಆಸ್ಪತ್ರೆಗಳ ಸಂಶೋಧಕರನ್ನು ಒಳಗೊಂಡ ತಂಡ ಈ ರಿಸರ್ಚ್‌ ಮಾಡಿದೆ. ಇದ್ರಲ್ಲಿ ಈ dexamethasone ಜಗತ್ತಿನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಎಫೆಕ್ಟಿವ್‌ ಆಗಿದೆ ಅಂತ ವಿಶ್ಲೇಷಿಸಲಾಗಿದೆ. ಖುಷಿ ವಿಚಾರ ಏನಪ್ಪ ಅಂದ್ರೆ ಭಾರತದಲ್ಲಿ ಇದು ಕಡಿಮೆ ಪರಿಣಾಮಕಾರಿ ಆಗಿರೋದ್ರಿಂದ, ಕೆಲವೊಮ್ಮೆ ಹೆಚ್ಚಿನ ಡೋಸ್‌ ಅಂದ್ರೆ 6ml ಜಾಗದಲ್ಲಿ 12ml ಕೊಡಬೇಕಾದ ಸಂದರ್ಭ ಬಂದ್ರೂ, ಅಸ್ಟೇನು ಸೈಡ್‌ ಎಫೆಕ್ಟ್‌ ಇರಲ್ಲ ಅನ್ನೋ ವಿಚಾರ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply