ಪಾಕಿಸ್ತಾನಕ್ಕೆ ಭೇಟಿ ನೀಡುವ ತನ್ನ ನಾಗರಿಕರಿಗೆ ಭಯೋತ್ಪಾದಕರ ದಾಳಿ ಕುರಿತು ಎಚ್ಚರಿಕೆ ನೀಡಿದ UK!

masthmagaa.com:

ಪಾಕಿಸ್ತಾನಕ್ಕೆ ಹೋಗುವ ತನ್ನ ನಾಗರಿಕರಿಗೆ ಬ್ರಿಟನ್‌ ಸರ್ಕಾರ ಹೊಸ ಗೈಡ್‌ಲೈನ್ಸ್‌ಗಳನ್ನ ರಿಲೀಸ್‌ ಮಾಡಿದ್ದು, ಅದ್ರಲ್ಲಿ ಭಯೋತ್ಪಾದನೆ ಅಪಾಯ ಹೆಚ್ಚಾಗಿರುತ್ತೆ ಎಚ್ಚರ ಅಂತ ಹೇಳಿದೆ. ಈ ಮಾರ್ಗಸೂಚಿಯಲ್ಲಿ, ಪಾಕ್‌ನಲ್ಲಿ ಯಾವಾಗ ಬೇಕಾದ್ರು ಉಗ್ರರು ದಾಳಿ ಮಾಡ್ಬಹುದು. ಅಲ್ಲಿನ Foreign, Commonwealth and Development Office (FCDO) ನೀಡಿರೋ ಮಾರ್ಗಸೂಚಿಯಲ್ಲಿ, ಇಸ್ಲಾಮಾಬಾದ್‌, ರಾವಲ್ಪಿಂಡಿ, ಲಾಹೋರ್‌ ಹಾಗೂ ಕರಾಚಿಯಂತಹ ಪ್ರಮುಖ ನಗರಗಳು ಸೇರಿದಂತೆ ಪಾಕ್‌ನಾದ್ಯಂತ ಕಿಡ್ನಾಪ್‌, ಜನಾಂಗೀಯ ಹಿಂಸೆ ಸೇರಿದಂತೆ ಭಯೋತ್ಪಾದನೆಯ ಹೈ ಥ್ರೆಟ್‌ ಇದೆ. ಜೊತೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಜೆಗಳನ್ನ ಟಾರ್ಗೆಟ್‌ ಮಾಡೋ ಸಾಧ್ಯತೆ ಜಾಸ್ತಿಯಿದ್ದು, ಪಬ್ಲಿಕ್‌ ಈವೆಂಟ್‌ ಹಾಗೂ ಕ್ರೌಡ್‌ಗಳನ್ನ ಅವೈಡ್‌ ಮಾಡಿ ಅಂತ ತಿಳಿಸಲಾಗಿದೆ. ಅಷ್ಟೆ ಅಲ್ದೆ ಕೆಲ ಜಿಲ್ಲೆಗಳಿಗಂತೂ ಕಾಲಿಡೋಕೆ ಹೋಗ್ಬೇಡಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply