ಭಾರತದಲ್ಲಿ ನಡೆಯುತ್ತಂತೆ 2036ರ ಒಲಿಪಿಂಕ್ಸ್‌! ಅಮಿತ್‌ ಶಾ ನೇತೃತ್ವದಲ್ಲಿ ಉನ್ನತ ಸಭೆ!

masthmagaa.com:

2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿಕೊಳ್ಳೋಕೆ ಭಾರತ ಸಿಕ್ಕಾಪಟ್ಟೆ ಇಂಟರೆಸ್ಟ್‌ ತೋರಿಸ್ತಾಯಿದೆ. ಈ ನಿಟ್ಟಿನಲ್ಲಿ ಒಲಿಂಪಿಕ್ಸ್‌ ಬಿಡ್‌ಗಾಗಿ ಆರಂಭಿಕ ಸಿದ್ಧತೆಗಳು ಕೂಡ ಪ್ರಾರಂಭವಾಗಿವೆ. ಇದರ ಭಾಗವಾಗಿ ಅಹಮದಾಬಾದ್‌ನಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಹರ್ಷ ಸಾಂಘ್ವಿ ಹಾಗೂ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್ ಪಾಲ್ಗೊಂಡಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಗಳ ಮಾನದಂಡಗಳ ಪ್ರಕಾರ ಕ್ರೀಡಾ ಮೂಲಸೌಕರ್ಯ, ಕ್ರೀಡಾಪಟು ಮತ್ತು ತರಬೇತುದಾರರಿಗೆ ಸೌಲಭ್ಯಗಳು ಹಾಗೂ ವಸತಿ ಸೌಕರ್ಯಗಳನ್ನು ನಿರ್ಮಿಸೋಕೆ ಗೃಹ ಸಚಿವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಗುಜರಾತ್‌ನಲ್ಲಿ ಮುಂದಿನ ಒಲಿಂಪಿಕ್ಸ್‌ನ್ನ ಅದ್ಧೂರಿಯಾಗಿ ಆಯೋಜಿಸೋಕೆ ವಿಸ್ತೃತ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply