ಏಕರೂಪ ನಾಗರಿಕ ಸಂಹಿತೆ ಪರ ಮೋದಿ ಬ್ಯಾಟ್!

masthmagaa.com:

ಮಧ್ಯಪ್ರದೇಶ ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕರೂಪ ನಾಗರಿಕ ಸಂಹಿತೆ ಪರ ಬ್ಯಾಟ್‌ ಬೀಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೂಡ ಕೇಳಿದೆ ಅಂತ ಹೇಳಿದ್ದಾರೆ. ದೇಶಕ್ಕೆ ಸಾಮಾನ್ಯ ಕಾನೂನನ್ನ ವಿರೋಧಿಸುವರು ತಮ್ಮ ಹಿತಾಸಕ್ತಿಗಳಿಗಾಗಿ ಜನರನ್ನ ಪ್ರಚೋದಿಸುತ್ತಿದ್ದಾರೆ. ಜೊತೆಗೆ ಯಾವ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಜನರನ್ನ ಪ್ರಚೋದಿಸುತ್ತಿವೆ ಮತ್ತು ನಾಶಪಡಿಸುತ್ತಿವೆ ಅನ್ನೋದನ್ನ ಭಾರತೀಯ ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಅಂತ ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಸಂವಿಧಾನದಲ್ಲಿ ಎಲ್ಲಾ ನಾಗರಿಕರಿಗೂ ಸಮಾನ ಹಕ್ಕುಗಳನ್ನ ಕಲ್ಪಿಸಲಾಗಿದೆ. ಅಲ್ದೆ ಏಕರೂಪ ನಾಗರಿಕ ಸಂಹಿತೆಯನ್ನು ಸುಪ್ರೀಂಕೋರ್ಟ್ ಕೂಡ ಕೇಳಿದೆ ಅಂತ ಹೇಳಿದ್ದಾರೆ. ಜೊತೆಗೆ ತ್ರಿವಳಿ ತಲಾಖ್‌ನ್ನ ಸಪೋರ್ಟ್‌ ಮಾಡೋರ ವಿರುದ್ಧ ಕೂಡ ಮೋದಿ ವಾಗ್ದಾಳಿ ನಡೆಸಿದ್ದಾರೆ. ವೋಟ್‌ ಬ್ಯಾಂಕ್‌ಗಾಗಿ ಕೆಲವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಪದ್ಧತಿ ಇಡೀ ಕುಟುಂಬವನ್ನ ನಾಶಪಡಿಸುತ್ತೆ. ಮುಸ್ಲಿಂ ಬಹುಸಂಖ್ಯಾತ ದೇಶಗಳು ಈ ತ್ರಿವಳಿ ತಲಾಖ್‌ನ್ನ ನಿಷೇಧಿಸಿವೆ. ನಾನು ಈಜಿಪ್ಟ್‌ಗೆ ಹೋದಾಗ ಅವರು ಸುಮಾರು 80 ರಿಂದ 90 ವರ್ಷಗಳ ಹಿಂದೆಯೇ ಅದನ್ನ ರದ್ದು ಮಾಡಿದ್ದಾರೆ ಅಂತ ತಿಳಿಯಿತು. ಈ ತ್ರಿವಳಿ ತಲಾಖ್‌ ಪದ್ಧತಿ ಇಸ್ಲಾಂಗೆ ಸಂಬಂಧಿಸಿದ್ದೇ ಆಗಿದ್ರೆ ಯಾವುದೇ ಮುಸ್ಲಿಂ ದೇಶ ಅದನ್ನ ಬ್ಯಾನ್‌ ಮಾಡ್ತಾ ಇರ್ಲಿಲ್ಲ ಅಂತ ಮೋದಿ ತಿಳಿಸಿದ್ದಾರೆ. ಅಲ್ದೇ ದೇಶ ಎರಡು ಕಾನೂನುಗಳಿಂದ ನಡೆಯಲು ಸಾಧ್ಯವೆ? ಒಂದೇ ಕುಟುಂಬದಲ್ಲಿನ ಸದಸ್ಯರಿಗೆ ವಿವೀದ ನಿಯಮಗಳಿದ್ರೆ ನಡೆಯುತ್ತಾ ಅಂತ ಪ್ರಶ್ನಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ನಡೆದ ವಿರೋಧ ಪಕ್ಷಗಳ ಸಭೆ ಬಗ್ಗೆ ಮಾತಾಡಿರೋ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಗ್ಯಾರಂಟಿ ಅನ್ನೊ ಹೊಸ ಪದವನ್ನ ಫೇಮಸ್‌ ಮಾಡಲಾಗ್ತಿದೆ. ಆದರೆ ಈ ವಿರೋಧ ಪಕ್ಷಗಳಿಗೆ ಗ್ಯಾರಂಟಿ ಅಂದ್ರೆ ಅದು ಭ್ರಷ್ಟಾಚಾರ. ವಿರೋಧ ಪಕ್ಷಗಳ ಭ್ರಷ್ಟಾಚಾರವನ್ನ ಒಟ್ಟುಗೂಡಿಸಿದರೆ ಅದು 20 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗುತ್ತದೆ. ಕಾಂಗ್ರೆಸ್‌ ಒಂದೇ ಲಕ್ಷ ಕೋಟಿ ಹಗರಣಗಳಲ್ಲಿ ಭಾಗಿಯಾಗಿದೆ. ಈ ವಿರೋಧ ಪಕ್ಷಗಳು ಹಗರಣಗಳ ಅನುಭವವನ್ನ ಮಾತ್ರ ಹೊಂದಿದ್ದು, ಅವರು ಕೇವಲ ಹಗರಣಗಳ ಗ್ಯಾರಂಟಿ ಮಾತ್ರ ಕೊಡೋಕೆ ಸಾಧ್ಯ. ಆದರೆ ದೇಶದ ಜನ ಈ ಗ್ಯಾರಂಟಿಯನ್ನ ಒಪ್ಪಿಕೊಳ್ಳುತ್ತಾ ಅನ್ನೋದನ್ನ ನಿರ್ಧಾರ ಮಾಡ್ಬೇಕಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಮೋದಿಯವರು ಕೂಡ ದೇಶದ ಜನರಿಗೆ ಗ್ಯಾರಂಟಿ ನೀಡಿದ್ದಾರೆ. ಅದೇನಂದ್ರೆ ಪ್ರತಿಯೊಬ್ಬ ಹಗರಣಗಾರರ ವಿರುದ್ಧ ಕ್ರಮಕೈಗೊ‍ಳ್ಳೋದು ಅಂತ ಮೋದಿ ತಾವು ನೀಡೋ ಗ್ಯಾರಂಟಿ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಈ ಪಕ್ಷಗಳು ಒಬ್ಬರೊನ್ನಬ್ಬರು ಬೈದಾಡುಕೊಂಡು ಓಡಾಡ್ತಿದ್ದರು, ಆದ್ರೆ ಇದೀಗ ಪರಸ್ಪರ ಕಾಲಿಗೆ ಬೀಳ್ತಿವೆ, ಇದು ಅವ್ರ ಅಸಹಾಯಕತೆಯನ್ನ ತೋರಿಸುತ್ತೆ ಅಂತ ವ್ಯಂಗ್ಯ ಮಾಡಿದ್ದಾರೆ. ಇತ್ತ ಪ್ರಧಾನಿ ಅವ್ರ UCC ಪ್ರಸ್ತಾಪದ ವಿರುದ್ಧ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ. ಇಸ್ಲಾಂನಲ್ಲಿ ಮದುವೆ ಅನ್ನೋದು ಒಂದು ಒಪ್ಪಂದ. ಇದು ಬೇರೆ ಧರ್ಮಗಳಿಗಿಂತ ವಿಭಿನ್ನ. ನೀವು ಎಲ್ಲವನ್ನೂ ಬೆರೆಸುತ್ತೀರಾ? ಯುಸಿಸಿ ಹೆಸರಿನಲ್ಲಿ ನೀವು ಬಹುತ್ವ ಹಾಗೂ ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? ನಾನು ಪ್ರಧಾನಿಗೆ ಸವಾಲು ಹಾಕುತ್ತೇನೆ. ನಿಮ್ಮ ಬಳಿ 300 ಸಂಸದರಿದ್ದಾರೆ. ಹಿಂದೂ ಅವಿಭಜಿತ ಕುಟುಂಬ ವಿನಾಯಿತಿ ರದ್ದುಗೊಳಿಸಿ. ಪಂಜಾಬ್‌ಗೆ ಹೋಗಿ ಸಿಖ್ಖರ ಬಳಿ ಯುಸಿಸಿ ಬಗ್ಗೆ ಮಾತನಾಡಿ. ಅವರ ಪ್ರತಿಕ್ರಿಯೆ ಹೇಗೆ ಇರುತ್ತದೆ ಎಂದು ನೋಡಿ..ಅಂತ ಸವಾಲ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply