18 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸಿಎಂ ಖರ್ಚು ಮಾಡಿದ್ದೆಷ್ಟು?

masthmagaa.com:

ಕಳೆದ 10 ವರ್ಷದಲ್ಲಿ ಸಿಎಂ, ಗವರ್ನರ್‌, ಸಚಿವರ ವೈಮಾನಿಕ ಹಾರಾಟಕ್ಕೆ ಒಟ್ಟಾರೆ 96.65 ಕೋಟಿ ವೆಚ್ಚವಾಗಿದೆ ಅಂತ RTI ದಾಖಲೆಗಳಿಂದ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ಅವ್ರು ಸಿಎಂ ಆಗಿದ್ದಾಗ 18 ತಿಂಗಳ ಅವಧಿಯಲ್ಲಿ ವಿಮಾನ ಹಾರಾಟಕ್ಕೆ 13.07 ಕೋಟಿ ರೂ. ಖರ್ಚು ಮಾಡಿದ್ರೆ, ಸಿಎಂ ಬಸವರಾಜ ಬೊಮ್ಮಾಯಿ ಕಳೆದ 18 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸರ್ಕಾರಿ ಬೊಕ್ಕಸದ 23.67 ಕೋಟಿ ರೂ. ಖರ್ಚು ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಅಲ್ದೇ ಬೊಮ್ಮಾಯಿ ಹೊರರಾಜ್ಯಗಳಿಗಿಂತಲೂ ರಾಜ್ಯದೊಳಗೇ ಅತಿಹೆಚ್ಚು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ. ಬೆಂಗಳೂರಿನಿಂದ 1 ಗಂಟೆ ದೂರವಿರೊ ತುಮಕೂರಿಗೂ ಹೆಲಿಕಾಪ್ಟರ್‌ನಲ್ಲಿ ತೆರಳಿರೋ ಮಾಹಿತಿ RTI ದಾಖಲೆಯಿಂದ ತಿಳಿದು ಬಂದಿದೆ. ಅಂದ್ಹಾಗೆ 2013-14ನೇ ಸಾಲಿನಿಂದ 2023ರ ಜನವರಿ ಅಂತ್ಯದವರಿಗೆ ಸಿಎಂ, ಗವರ್ನರ್‌, ಸಚಿವರ ವೈಮಾನಿಕ ಹಾರಾಟಕ್ಕೆ ಮಾಡಿರೊ ಖರ್ಚಿಗೆ ಸಂಬಂಧಿಸಿದಂತೆ ʻದಿ ಫೈಲ್‌ʼ RTI ಅಡಿಯಲ್ಲಿ ಅರ್ಜಿ ಕೋರಿತ್ತು.

-masthmagaa.com

Contact Us for Advertisement

Leave a Reply