ನಕಲಿ ಕೊರೋನಾ ಲಸಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

masthmagaa.com:

ಭಾರತದಲ್ಲಿ ಲಸಿಕೆ ಅಭಿಯಾನ ವೇಗ ಪಡೆಯುತ್ತಿರೋ ಹೊತ್ತಲ್ಲೇ ಹೊಸ ಟೆನ್ಶನ್ ಶುರುವಾಗಿದೆ. ಅದೇನಂದ್ರೆ ಆಫ್ರಿಕಾದ ಹಲವು ದೇಶಗಳಲ್ಲಿ ನಕಲಿ ಕೋವಿಶೀಲ್ಡ್​ ಲಸಿಕೆಗಳನ್ನು ಪತ್ತೆಹಚ್ಚಲಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದು, ನಕಲಿ- ಅಸಲಿ ಲಸಿಕೆಗಳನ್ನು ಪತ್ತೆಹಚ್ಚೋದು ಹೇಗೆ ಅಂತ ಮಾಹಿತಿ ನೀಡಿದೆ. ಇದ್ರಲ್ಲಿ ಲಸಿಕೆ ಮೇಲಿರೋ ಲೇಬಲ್​​, ಬಣ್ಣ ಮತ್ತು ಲಸಿಕೆ ಉತ್ಪಾದಕರು ನೀಡುವ ಇತರೆ ವಿವರಗಳ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ ನಕಲಿ ಲಸಿಕೆ ಬಗ್ಗೆ ಸೂಕ್ತ ತನಿಖೆ ನಡೆಸೋದಾಗಿಯೂ ಹೇಳಿದೆ.

-masthmagaa.com

Contact Us for Advertisement

Leave a Reply