ಟರ್ಕಿಯಲ್ಲಿ ‘ಆಪರೇಷನ್‌ ದೋಸ್ತ್’ ಯಶಸ್ವಿ, ಸಿಬ್ಬಂದಿಗೆ ಅಭಿನಂದಿಸಿದ ಪ್ರಧಾನಿ ಮೋದಿ!

masthmagaa.com:

ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾದಲ್ಲಿ ಭಾರತ ಆರಂಭಿಸಿದ್ದ ‘ಆಪರೇಷನ್‌ ದೋಸ್ತ್’ ಹೆಸರಿನ ರಕ್ಷಣಾ ಕಾರ್ಯಾಚರಣೆ ಮುಗಿಸಿ ವಾಪಾಸ್ಸಾಗಿರೋ ವಾಯುಪಡೆ, ಎನ್‌ಡಿಆರ್‌ಎಫ್‌ ಇತರೆ ಸಿಬ್ಬಂದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ಭೂಕಂಪ ಪೀಡಿತ ಪ್ರದೇಶದಲ್ಲಿ ತ್ವರಿತ ಕಾರ್ಯಾಚರಣೆ ನಡೆಸಿ, ವಿಶ್ವದ ಮನಗೆದ್ದ ನಿಮ್ಮ ಕಾರ್ಯಕ್ಕೆ ಸಾಟಿಯೇ ಇಲ್ಲ. ಇದು ನಮ್ಮ ದೇಶ, ಪ್ರಕೃತಿ ವಿಕೋಪ ಎದುರಿಸೋಕೆ ಹೇಗೆ ಸಜ್ಜಾಗಿದೆ ಅನ್ನೋದನ್ನ ಜಗತ್ತಿಗೆ ತೋರಿಸಿದೆ ಅಂತ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾರ್ಯಾಚರಣೆ ಮುಗಿಸಿ ಟರ್ಕಿಯಿಂದ ಮರಳುವಾಗ ಅಲ್ಲಿನ ಜನರು ಆತ್ಮೀಯತೆಯಿಂದ ಬೀಳ್ಕೊಟ್ರು. ಇನ್ನೂ ಕೆಲವರು ಕಣ್ಣೀರು ಹಾಕುತ್ತಾ ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದ್ರು ಅಂತ ಸಿಬ್ಬಂದಿಯೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply