“ನನಗೆ RRR ಸಿನಿಮಾ ಇಷ್ಟ ಆಗಿರಲಿಲ್ಲ”: ಧೂಮಂ ಸಿನಿಮಾದ ಮಿಶ್ರ ಪ್ರತಿಕ್ರಿಯೆಗೆ ಪವನ್‌ಕುಮಾರ್‌ ಬೇಸರ!

masthmagaa.com:

ಧೂಮಂ ಸಿನಿಮಾ ಮೂಲತಃ ಮಲಯಾಳಂ ಭಾಷೆ ಆದ್ರೂ ಕೂಡ ಕರ್ನಾಟಕದಲ್ಲಿ ಕನ್ನಡದಲ್ಲಿ ಡಬ್‌ ಮಾಡಿ ರಿಲೀಸ್‌ ಮಾಡಲಾಗಿದೆ. ಇನ್ನು ಈ ಸಿನಿಮಾ ಚೆನ್ನಾಗಿಲ್ಲ ಹಲವಾರು ಜನ ಕಾಮೆಂಟ್‌ ಮತ್ತು ರಿವ್ಯೂವ್‌ಗಳಲ್ಲಿ ತಮ್ಮ ಒಪಿನಿಯನ್‌ ಅನ್ನ ಹೇಳ್ತಾ ಬಂದಿದ್ದಾರೆ. ಫಹಾದ್ ಫಾಸಿಲ್ ನಟಿಸಿರುವ ಧೂಮಂ ಸಿನಿಮಾ ಬಗ್ಗೆ ನೆಗೆಟೀವ್‌ ಮಾತಾಡೋರಿಗೆ ಚಿತ್ರದ ಡೈರೆಕ್ಟರ್‌ ಪವನ್‌ ಕುಮಾರ್‌ ವಿಡಿಯೋ ಮೂಲಕ ಮನವಿಯನ್ನ ಮಾಡಿದ್ದಾರೆ.

” ನಾನು ಬಹಳ ವರ್ಷಗಳ ಬಳಿಕ ಈ ಸಿನಿಮಾ ಮಾಡಿದ್ದೇನೆ, ಏಳು ವರ್ಷಗಳ ಹಿಂದೆಯ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ವಿಮರ್ಶೆಗಳ ಹಾವಳಿ ಬಹಳ ಹೆಚ್ಚಾಗಿದೆ. ಎಷ್ಟು ಬೇಗ ವಿಮರ್ಶೆಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆಂದರೆ ಸಿನಿಮಾ ಬಗ್ಗೆ ಯೋಚಿಸಿ ವಿಮರ್ಶೆ ನೀಡುವ ಸಮಯವನ್ನೂ ಸಹ ಅವರು ತೆಗೆದುಕೊಳ್ಳುತ್ತಿಲ್ಲ. ಧಾವಂತದಲ್ಲಿ ನಾ ಮುಂದು ತಾ ಮುಂದು ಎಂದು ಅಪ್​ಲೋಡ್ ಮಾಡುತ್ತಾರೆ. ಆದಷ್ಟು ಬೇಗ ಜನರನ್ನು ಸಿನಿಮಾ ಬಗ್ಗೆ ಇನ್​ಫ್ಲುಯೆನ್ಸ್ ಮಾಡಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಸಿನಿಮಾ ವಿಮರ್ಶೆ ಮಾಡುವವರು ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಿಲ್ಲ. ಮಾತ್ರವಲ್ಲ ಸಿನಿಮಾಕ್ಕೆ ಒಂದು ಅವಕಾಶವನ್ನು, ಸಣ್ಣ ಕಾಲಾವಕಾಶವನ್ನೂ ಕೊಡದೆ ಸಿನಿಮಾದ ವಿರುದ್ಧ ವಿಮರ್ಶೆಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ, ನಿಮ್ಮ ನಿರ್ಣಯವನ್ನು ನೀವು ಮಾಡಿ. ಒಬ್ಬರಿಗೆ ಇಷ್ಟವಾದ ಸಿನಿಮಾ ಇನ್ನೊಬ್ಬರಿಗೆ ಇಷ್ಟವಾಗದೇ ಹೋಗಬಹುದು. ಸಿನಿಮಾದ ಟ್ರೈಲರ್, ಪೋಸ್ಟರ್​ಗಳ ಮೇಲೆ ಸಿನಿಮಾ ನೋಡುವ ನಿರ್ಣಯ ಮಾಡಿ, ವಿಮರ್ಶೆಗಳ ಆಧಾರದಲ್ಲಿ ಸಿನಿಮಾ ನೋಡುವುದೋ ಬೇಡವೋ ಎಂಬ ಬಗ್ಗೆ ನಿರ್ಣಯ ಮಾಡಬೇಡಿ. ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ಒಂದು ದೊಡ್ಡ ಸೂಪರ್ ಹಿಟ್ ಸಿನಿಮಾ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಆ ಸಿನಮಾ ಆಸ್ಕರ್​ಗೆ ಸಹ ಹೋಯಿತು ಆದರೆ ಆ ಸಿನಿಮಾ ನೋಡಿದ ಮೇಲೆ ನನಗೆ ಇಷ್ಟವಾಗಿರಲಿಲ್ಲ. ಅದಕ್ಕೆ ನನಗಿರುವ ವ್ಯಕ್ತಿತ್ವ, ನಾನು ಬೆಳೆದು ಬಂದ ಪ್ರಪಂಚ ಕಾರಣ ಆಗಿರಬಹುದು. ಹಾಗೆಯೇ ಪ್ರತಿ ಸಿನಿಮಾಗಳು ಪ್ರತಿಯೊಬ್ಬರಿಗೂ ಬೇರೆ-ಬೇರೆ ರೀತಿಯಲ್ಲಿ ತಟ್ಟುತ್ತವೆ, ಬೇರೆ-ಬೇರೆ ರೀತಿಯಲ್ಲಿ ಅರ್ಥವಾಗುತ್ತವೆ. ಹಾಗಾಗಿ ಬೇರೆಯವರ ಅಭಿಪ್ರಾಯದ ಮೇಲೆ ನಿರ್ಭರವಾಗದೆ ನೀವೇ ಹೋಗಿ ಸಿನಿಮಾ ನೋಡಿ ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳಿ” ಅಂತ ಪವನ್‌ ಕುಮಾರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply