ಕೆಂಪು ಸಮುದ್ರದಲ್ಲಿ ಕಲಹದ ಮಧ್ಯೆ ಕಾಣಿಸಿಕೊಂಡ “I LOVE UAE” ಚಿತ್ರಣ!

masthmagaa.com:

ಕೆಂಪು ಸಮುದ್ರದಲ್ಲಿ ಹೌತಿಗಳಿಂದ ಉದ್ವಿಗ್ನತೆ ಇರೋ ಹೊತ್ತಲ್ಲೇ, ಯೆಮನ್‌ನ ದ್ವೀಪ ಒಂದ್ರಲ್ಲಿ ಏರ್‌ ಸ್ಟ್ರಿಪ್ ಒಂದು ನಿರ್ಮಾಣ ಆಗ್ತಿರೋ ಸ್ಯಾಟಲೈಟ್‌ ಚಿತ್ರ ಕಾಣಿಸಿಕೊಂಡಿದೆ. ಅಲ್ಲದೆ ಇದರ ಬಳಿ “I LOVE UAE” ಅಂತ ಬರೆಯಲಾಗಿದ್ದು, ಈ ಸ್ಯಾಟಲೈಟ್‌ ಚಿತ್ರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಂಪು ಸಮುದ್ರದ ತಳಭಾಗ ಅಂದ್ರೆ ಏಡನ್‌ಕೊಲ್ಲಿ ಬಳಿ ಯೆಮೆನ್‌ಗೆ ಸೇರಿದ ಅಬ್ದ್‌ ಅಲ್‌ ಕುರಿ ದ್ವೀಪದಲ್ಲಿ ಈ ಚಿತ್ರ ಸೆರೆಯಾಗಿದೆ. ಆದ್ರೆ ಈ ಏರ್‌ ಸ್ಟ್ರಿಪ್‌ ನಿರ್ಮಾಣ ಮಾಡ್ತಿರೋದು ಯಾರು ಅನ್ನೋ ವಿಚಾರವೇ ತಿಳಿದಿಲ್ಲ, ಯಾವ ದೇಶವೂ ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿಲ್ಲ. ಆದ್ರೆ I LOVE UAE ಅಂತ ಕಾಣಿಸೋ ತರ ಮಣ್ಣಿನ ಗುಡ್ಡೆಗಳಿಂದ ಬರೆದಿರೋದು ಮಾತ್ರ ಸ್ಯಾಟಲೈಟ್‌ ಇಮೇಜ್‌ಗಳಲ್ಲಿ ಕಾಣಿಸ್ತಿದೆ. ಈ ಬಗ್ಗೆ ರಿಪ್ಲೈ ನೀಡಿರೋ UAE, ʻಯೆಮನಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಜೊತೆಗೆ ನೆರವು ಕೆಲಸಗಳಲ್ಲಿ ತೊಡಗಿರೋದು ಬಿಟ್ರೆ, ಆ ಭಾಗದಲ್ಲಿ UAEನ ಬೇರೆ ಯಾವುದೇ ಪಡೆಗಳಿಲ್ಲʼ ಅಂತ ಕ್ಲಾರಿಟಿ ಕೊಟ್ಟಿದೆ.

-masthmagaa.com

Contact Us for Advertisement

Leave a Reply