ಕಪಾಳಮೋಕ್ಷ ಮಾಡಿಸಿಕೊಂಡ ಕಾಮಿಡಿಯನ್ ಕ್ಷಮೆಯಾಚಿಸಿದ ವಿಲ್ ಸ್ಮಿತ್!

masthmagaa.com:

ಆಸ್ಕರ್ ಕಾರ್ಯಕ್ರಮದಲ್ಲಿ ಕಾಮಿಡಿಯನ್ ಕ್ರಿಸ್ ರಾಕ್​​ಗೆ ಕೆನ್ನೆಗೆ ಬಾರಿಸಿದ್ದ ನಟ ವಿಲ್ ಸ್ಮಿತ್ ಬಹಿರಂಗವಾಗಿ ಕ್ಷಮೆಯಾಚಿಸಿದ್ಧಾರೆ. ಕಾರ್ಯಕ್ರಮದಲ್ಲಿ ವಿಲ್ ಸ್ಮಿತ್​​​ಗೆ ಬೆಸ್ಟ್ ನಟ ಅನ್ನೋ ಪ್ರಶಸ್ತಿ ಸಿಕ್ಕಿತ್ತು. ಆದ್ರೆ ಅವರ ಪತ್ನಿಯ ಹೇರ್ ಸ್ಟೈಲ್ ಬಗ್ಗೆ ಕ್ರಿಸ್ ರಾಕ್ ಮಾತನಾಡಿದಾಗ ಕೋಪಗೊಂಡ ವಿಲ್ ಸ್ಮಿತ್, ನೇರವಾಗಿ ಸ್ಟೇಜ್​​ಗೆ ಹೋಗಿ ಕ್ರಿಸ್​ ರಾಕ್ ಕೆನ್ನೆಗೆ ಬಾರಿಸಿದ್ರು. ಈ ಬಗ್ಗೆ ಈಗ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರೋ ನಟ ವಿಲ್ ಸ್ಮಿತ್​, ನಾನು ಬಹಿರಂಗವಾಗಿ ಕ್ಷಮೆಯಾಚಿಸಲು ಬಯಸ್ತೀನಿ. ನಾನು ಕಂಟ್ರೋಲ್ ಕಳ್ಕೊಂಡಿದ್ದೆ. ತಪ್ಪು ನಂದೇ.. ನನ್ನ ಕೆಲಸದಿಂದ ನನಗೇ ನಾಚಿಕೆಯಾಗಿದೆ.. ಹಿಂಸೆ ಯಾವುದೇ ರೀತಿಯದ್ದಾಗಿದ್ದರೂ ಅದು ಅಕ್ಷಮ್ಯ.. ಒಪ್ಪಿಕೊಳ್ಳಲು ಸಾಧ್ಯವಿಲ್ಲ.. ಜೋಕ್ಸ್​​ ನನ್ನ ಕೆಲಸದ ಒಂದು ಭಾಗವೇ.. ಆದ್ರೆ ನನ್ನ ಪತ್ನಿಯ ಮೆಡಿಕಲ್ ಕಂಡೀಷನ್ ಕುರಿತ ಜೋಕ್​​​ ಸಹಿಸಲು ಸಾಧ್ಯವಾಗಲಿಲ್ಲ.. ಎಮೋಷನಲ್ ಆಗಿ ರಿಯಾಕ್ಟ್ ಮಾಡಿದೆ ಅಂತ ಹೇಳಿದ್ದಾರೆ. ಅಂದಹಾಗೆ ಅವರ ಪತ್ನಿಗೆ ಆರೋಗ್ಯದ ಸಮಸ್ಯೆ ಇದ್ದು, ಕೂದಲಿನ ಸಮಸ್ಯೆ ಇದೆ. ಇದನ್ನೇ ಕ್ರಿಸ್​ ರಾಕ್ ಕಾಮಿಡಿ ಮಾಡಿ ಮಾತಾಡಿದ್ರು. ಇನ್ನು ಆಸ್ಕರ್ ಸಂಸ್ಥೆ ಕೂಡ ಘಟನೆಯನ್ನು ಖಂಡಿಸಿದ್ದು, ಈ ಬಗ್ಗೆ ಪರಿಶೀಲನೆಗೆ ಸೂಚಿಸಿದೆ.

-masthmagaa.com

Contact Us for Advertisement

Leave a Reply