ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸೋದಿಲ್ಲ: ಸಿಎಂ ಸಿದ್ದರಾಮಯ್ಯ

masthmagaa.com:

GST ಪಾಲು ಸೇರಿದಂತೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಹಣವನ್ನ ಒತ್ತಾಯಪೂರ್ವಕವಾಗಿ ಕೇಳುತ್ತೇನೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಮಳೆ ಬರದೇ ಆತಂಕ ಎದುರಾಗಿರೋದ್ರಿಂದ ಈ ಕುರಿತು ಚರ್ಚಿಸೋಕೆ ಜೂನ್‌ 12 ಅಂದ್ರೆ ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದೇನೆ. ಕುಡಿಯೋ ನೀರು ಪೂರೈಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದೇನೆ. ಜೊತೆಗೆ ಜನರಿಗೆ ತೊಂದ್ರೆ ಆಗದಂತೆ ಕ್ರಮ ವಹಿಸಲಾಗುವುದು ಅಂತ ಹೇಳಿದ್ದಾರೆ. ಇನ್ನು ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ತಮ್ಮ ವರುಣ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬಿಜೆಪಿ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನರ ಬೇಸತ್ತಿದ್ದರು. ಹೀಗಾಗಿ ಜನತೆ ಹೊಸ ಬದಲಾವಣೆ ಬಯಸಿ ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಈ ಹಿಂದೆ ವರುಣ ಕ್ಷೇತ್ರದಿಂದ ಗೆದ್ದು ಸಿಎಂ ಆಗಿದ್ದೆ. ಮತ್ತೊಮ್ಮೆ ವರುಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದೇನೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಅಂತ ಹೇಳಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವ್ರು ಅಧಿಕಾರಕ್ಕೆ ಬಂದ್ರೆ ವರುಣ ಕ್ಷೇತ್ರವನ್ನ ತಾಲೂಕು ಮಾಡ್ತೀವಿ ಅಂತ ಚುನಾವಣೆ ಟೈಮ್‌ನಲ್ಲಿ ಹೇಳಿದ್ದರು. ಆದ್ರೆ ಇದನ್ನ ಜನ ಕೇಳಿಲ್ಲ. ಬಿಜೆಪಿ ಅವ್ರು ಹೇಳ್ತಿದಾರೆ ಅಷ್ಟೆ. ಬೊಮ್ಮಾಯಿ ಕೇಳಿದ ತಕ್ಷಣ ಮಾಡೋಕೆ ಆಗಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣಾ ಸೇರಿದಂತೆ ಮೈಸೂರಿನ ಹಲವೆಡೆ ಪ್ರವಾಸ ಮಾಡಿದ್ದಾರೆ. ಈ ವೇಳೆ ಮೈಸೂರಿನಲ್ಲಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಕೋಪಗೊಂಡಿದ್ದಾರೆ. ಮೈಸೂರು ಏರ್‌ಪೋರ್ಟ್‌ನಿಂದ ಜಿಲ್ಲಾ ಪಂಚಾಯತ್ ಆವರಣಕ್ಕೆ ಬಂದಿದ್ದ ಸಿಎಂಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಯಾಕೆ ಝೀರೋ ಟ್ರಾಫಿಕ್‌ ಮಾಡಿದ್ದೀರಿ? ನಿಮಗೆ ಗೊತ್ತಿದೆಯಾ? ಝೀರೋ ಟ್ರಾಫಿಕ್‌ ಬೇಡ ಅಂತಾ ಹೇಳಿದ್ದೆ. ಇನ್ಮೇಲೆ ಈ ರೀತಿ ಮಾಡ್ಬೇಡಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅಂದ್ಹಾಗೆ ಕಾಂಗ್ರೆಸ್ ನೂತನ ಸರ್ಕಾರದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವ್ರು, ಸಾರ್ವಜನಿಕರಿಗೆ ತಮ್ಮಿಂದಾಗೋ ಕಿರಿಕಿರಿಗಳನ್ನ ತಪ್ಪಿಸಲು ಬೆಂಗಳೂರು ನಗರದ ಒಳಗೆ ಸಂಚಾರ ಮಾಡುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸೋದು ಬೇಡ ಅಂತ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದರು.

-masthmagaa.com

Contact Us for Advertisement

Leave a Reply