ಚೀನಾ ಗಡಿಯಲ್ಲಿ ಭಾರತೀಯ ವಾಯು ಪಡೆಯಿಂದ ʻಪೂರ್ವಿ ಆಕಾಶ್‌ʼ ಅಭ್ಯಾಸ

masthmagaa.com:

ಭಾರತ-ಚೀನಾ ಗಡಿಯಲ್ಲಿ ಭಾರತೀಯ ವಾಯು ಪಡೆ ʻಪೂರ್ವಿ ಆಕಾಶ್‌ʼ ಅನ್ನೋ ಪ್ರಮುಖ ಸಮರಾಭ್ಯಾಸ ನಡೆಸಿದೆ. ಇದನ್ನ ಅಕ್ಟೋಬರ್‌ 30 ರಿಂದ ನವೆಂಬರ್‌ 4 ರವರೆಗೆ ಆಯೋಜಿಸಲಾಗಿತ್ತು. ಭಾರತೀಯ ವಾಯು ಪಡೆ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಚರಣೆಯಲ್ಲಿ ‘ಸುದರ್ಶನ್‌’ ಎಸ್‌-400 ಏರ್‌ ಡಿಫೆನ್ಸ್‌ ಮಿಸೈಲ್‌ ಸಿಸ್ಟಮ್‌ಗಳಂತಹ ಹೈಟೆಕ್‌ ಮಾರಕ ಶಸ್ತ್ರಾಸ್ತ್ರಗಳನ್ನ ಬಳಸಲಾಗಿತ್ತು. ʻಈ ಏರ್‌ ಡ್ರಿಲ್‌ನಲ್ಲಿ ಎಸ್‌-400, ರಫೇಲ್‌ ಹಾಗೂ ತೇಜಸ್‌ ಫೈಟರ್‌ ಜೆಟ್‌ಗಳು ಮತ್ತು ಪ್ರಚಂಡ್‌ ಹೆಲಿಕಾಪ್ಟರ್‌ಗಳ ಕಾರ್ಯಚರಣೆಯನ್ನ ನಾರ್ತ್‌ ಈಸ್ಟ್‌ ಭಾಗದಲ್ಲಿ ನಡೆಸಲಾಗಿದೆ. ಈ ಮೂಲಕ ಭಾರತೀಯ ವಾಯು ಪಡೆ ತನ್ನ ಯುದ್ಧಸಿದ್ಧತೆ ಹಾಗೂ ಸಾಮರ್ಥ್ಯಗಳನ್ನ ತೋರಿಸಿಕೊಟ್ಟಿದೆ ಅಂತ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply