ಅಡುಗೆ ಎಣ್ಣೆ ಬೆಲೆಯಲ್ಲಿ ಕುಸಿತ: ಕೇಂದ್ರ ಸರ್ಕಾರ

masthmagaa.com:

ಕಳೆದ ಕೆಲ ತಿಂಗಳಿನಿಂದ ಅಡುಗೆ ಎಣ್ಣೆ ಮತ್ತು ವಾಹನಗಳಿಗೆ ಹಾಕೋ ಎಣ್ಣೆ – ಎರಡರ ರೇಟ್​ ಕೂಡ ಏರ್ತಾ ಹೋಗ್ತಿದೆ. ಆದ್ರೀಗ ಅಡುಗೆ ಎಣ್ಣೆಯ ಬೆಲೆಯಲ್ಲಿ ನಿಧಾನವಾಗಿ ಕುಸಿತ ಕಾಣ್ತಿದೆ ಅಂತ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಹೇಳಿದೆ. ಕಳೆದೊಂದು ತಿಂಗಳಲ್ಲಿ ಪಾಮ್ ಆಯಿಲ್​ ಬೆಲೆಯಲ್ಲಿ ಸುಮಾರು 19 ಪರ್ಸೆಂಟ್​ ಇಳಿಕೆ ಕಂಡ್ರೆ, ಸನ್​ಫ್ಲವರ್ ಆಯಿಲ್​ ಬೆಲೆಯಲ್ಲಿ 16 ಪರ್ಸೆಂಟ್ ಇಳಿಕೆ ಕಂಡಿದೆ ಅಂತ ಹೇಳಿದೆ. ಇನ್ನು ಅಡುಗೆ ಎಣ್ಣೆಯ ಬೆಲೆಯು ಅಂತಾರಾಷ್ಟ್ರೀಯ ಬೆಲೆ ಮತ್ತು ಭಾರತದಲ್ಲಿ ಅಡುಗೆ ಎಣ್ಣೆ ಉತ್ಪಾದನೆ ಸೇರಿದಂತೆ ಹಲವು ಅಂಶಗಳ ಮೇಲೆ ಡಿಪೆಂಡ್ ಅಗಿರುತ್ತೆ. ದೇಶದಲ್ಲಿ ಅದರ ಉತ್ಪಾದನೆ ಮತ್ತು ಬಳಕೆ ನಡುವಿನ ಗ್ಯಾಪ್ ದೊಡ್ಡದಿದೆ. ಹೀಗಾಗಿ ಭಾರತ ಒಂದಷ್ಟು ಪ್ರಮಾಣದ ಅಡುಗೆ ಎಣ್ಣೆಯನ್ನ ಆಮದು ಮಾಡಿಕೊಳ್ಳುತ್ತಿದೆ ಅಂತ ಮಿನಿಸ್ಟ್ರಿ ಆಫ್ ಕನ್ಸುಮರ್ ಅಫೇರ್ಸ್, ಫುಡ್​ ಅಂಡ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply