‘ಇಡಾ’ಗೆ ಅಮೆರಿಕ ಗಡಗಡ. ನ್ಯೂಯಾರ್ಕ್ ನಗರ ಅಲ್ಲಾಡಿಸಿದ ಚಂಡಮಾರುತ

masthmagaa.com:

ಅಮೆರಿಕದಲ್ಲಿ ಇಡಾ ಚಂಡಮಾರುತದ ಸಾವಿನ ಓಟ ಮುಂದುವರಿದಿದೆ. ನಿನ್ನೆ ನ್ಯೂಯಾರ್ಕ್ ನಗರದಲ್ಲಿ ರಾತ್ರೋರಾತ್ರಿ 44ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಚಂಡಮಾರುತ ನ್ಯೂಯಾರ್ಕ್ ಗೆ ಅಪ್ಪಳಿಸೋ ವೇಳೆಗೆಲ್ಲಾ ಸ್ಲೋ ಆಗೋಕೆ ಶುರುವಾಗಿತ್ತು. ಆದ್ರೂ ಅದರ ಪರಿಣಾಮ ಎಷ್ಟಿಂತ್ತಂದರೆ ಫ್ಲಾಶ್ ಫ್ಲಡ್ ಕ್ರಿಯೇಟ್ ಆಗಿತ್ತು. ಅಂದ್ರೆ ಸಡನ್ ಪ್ರವಾಹ ಸೃಷ್ಟಿಯಾಗಿತ್ತು. ರಸ್ತೆಗಳು ನದಿಗಳಂತಾಗಿದ್ದವು, ಮೆಟ್ರೋ ಅಂಡರ್ ಗ್ರೌಂಡ್ ಸ್ಟೇಷನ್ ಹಾಗೂ ಸುರಂಗಗಳಿಗೆಲ್ಲ ನೀರು ನುಗ್ಗಿ ಸೇವೆ ಬಂದ್ ಆಗಿತ್ತು. ನೂರಾರು ವಿಮಾನಗಳ ಸಂಚಾರ ರದ್ದಾಗಿತ್ತು.
ಇನ್ನು ಇಡಾ ಹಾವಳಿ ಬಗ್ಗೆ ಮಾತಾಡಿರೋ ಬೈಡೆನ್ ಸಂತ್ರಸ್ತರಿಗೆ, ಹಾನಿಗೀಡಾದ ಪ್ರದೇಶಗಳಿಗೆ ಎಲ್ಲ ನೆರವಿನ ಭರವಸೆ ನಿಡಿದ್ದಾರೆ. ‘ನೋಡಿ ನಾನ್ ಹೇಳಿಲ್ವಾ? ಹವಾಮಾನ ಬದಲಾವಣೆ ದೊಡ್ಡ ವಿಚಾರ ಅಂತಾ.? ಈಗ ಕಡೆಗೂ ಹವಾಮಾನ ರೊಚ್ಚಿಗೆದ್ದು ದಾಳಿ ಮಾಡಿದೆ’ ಅಂತ ಬೈಡೆನ್ ಹೇಳಿದ್ದಾರೆ. ಹವಾಮಾನ ಬದಲಾವಣೆ ಸಂಬಂಧ ಇಡೀ ವಿಶ್ವ ಸೇರಿ ಏನಾದ್ರೂ ಮಾಡ್ಬೇಕು ಅಂತ ಮೊದಲಿಂದಲೂ ವಾದಿಸುತ್ತಿರೋ ವ್ಯಕ್ತಿಗಳಲ್ಲಿ ಬೈಡೆನ್ ಪ್ರಮುಖರು.

-masthmagaa.com

Contact Us for Advertisement

Leave a Reply