ಮೋದಿಜಿ ಏಷ್ಯನ್‌ ಗೇಮ್ಸ್‌ ಆಡಲು ಬಿಡಿ: ಭಾರತ ಫುಟ್ಬಾಲ್‌ ಕೋಚ್‌

masthmagaa.com:

ಭಾರತ ಫುಟ್ಬಾಲ್ ತಂಡ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್‌ ಅಥವಾ ಏಷ್ಯಾಡ್‌ನಲ್ಲಿ ಭಾಗವಹಿಸ್ತಿಲ್ಲ. ಚೀನಾದ ಹ್ಯಾಂಗ್‌ಝೌನಲ್ಲಿ
ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಕೇಂದ್ರ ಸರ್ಕಾರ ಫುಟ್ಬಾಲ್‌ ತಂಡವನ್ನ ಕಳಿಸ್ತಿಲ್ಲ. ಕಳೆದ ಎರಡು ತಿಂಗಳಲ್ಲಿ ಭಾರತ ಪುಟ್ಬಾಲ್‌ ತಂಡ ಇಂಟರ್‌ನ್ಯಾಷನಲ್‌ ಕಪ್‌ ಹಾಗು ಸಾಫ್‌ ಚಾಂಪಿಯನ್‌ಶಿಪ್‌ ಹೀಗೆ ಎರಡ್ರಲ್ಲೂ ಒಂದೂ ಮ್ಯಾಚ್‌ ಸೋಲದೇ ಅಜೇಯವಾಗಿ ಚಾಂಪಿಯನ್‌ ಆಗಿದೆ. ಹೀಗಿದ್ದಾಗ ಏಷ್ಯಾಡ್‌ಗೆ ಕಳಿಸದೇ ಇರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ… ಈ ಬಗ್ಗೆ ಪ್ರತಿಕ್ರಿಯಿಸಿರೋ ಕ್ರೀಡಾ ಇಲಾಖೆ, ಟೀಂ ಗೇಮ್ಸ್‌ಗಳಲ್ಲಿ ಟಾಪ್‌ 8ರಲ್ಲಿರೋ ತಂಡಗಳನ್ನಷ್ಟೇ ಪರಿಗಣಿಸಲಾಗ್ತಿದೆ. ಈ ಟಾಪ್‌ 8 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯೋಕೆ ಭಾರತ ತಂಡ ವಿಫಲವಾಗಿದ್ದು, 18ನೇ ಸ್ಥಾನದಲ್ಲಿದೆ. ಹೀಗಾಗಿ ಈ ಟೂರ್ನಿಯಲ್ಲಿ ಭಾರತಕ್ಕೆ ಅವಕಾಶ ಸಿಕ್ಕಿಲ್ಲ ಅಂತ ಹೇಳಿದೆ. ಆದ್ರೆ ಈ ಬಗ್ಗೆ ಮರುಪರಿಶೀಲನೆ ಮಾಡುವಂತೆ ಮನವಿ ಮಾಡ್ತೀವಿ ಅಂತ AIFF ಕಾರ್ಯದರ್ಶಿ ಶಾಜಿ ಪ್ರಭಾಕರನ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ ಭಾರತದ ಫುಟ್‌ಬಾಲ್‌ ತಂಡಕ್ಕೆ ಏಷ್ಯನ್‌ ಗೇಮ್ಸ್‌ನಲ್ಲಿ ಆಡಲು ಅವಕಾಶ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವ್ರನ್ನ ಮನವಿ ಮಾಡಿಕೊಳ್ತೇನೆ ಅಂತ ಫುಟ್‌ಬಾಲ್‌ ತಂಡದ ಕೋಚ್‌ ಇಗೋರ್‌ ಸ್ಟಿಮ್ಯಾಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply