ಪಾಕಿಸ್ತಾನದ ಮೇಲೆ ಕರುಣೆ ತೋರಿ ಸಾಲ ಕೊಡಲು ಒಪ್ಪಿದ IMF!

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟು ಹೋಗಿದ್ದ ಪಾಕಿಸ್ತಾನಕ್ಕೆ ಅಂತೂ IMF ತನ್ನ ಕೃಪೆ ತೋರಿಸಿದ್ದು, ಸಾಲ ಕೊಡೋಕೆ ಒಪ್ಪಿಕೊಂಡಿದೆ. 3 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.6 ಸಾವಿರ ಕೋಟಿ ರೂಪಾಯಿ ಬೇಲೌಟ್‌ ಪ್ರೋಗ್ರಾಮ್‌ಗೆ ಅನುಮೋದನೆ ನೀಡಿದೆ. ಅಲ್ದೆ ಈ ಒಟ್ಟು ಪ್ಯಾಕೇಜ್‌ನಲ್ಲಿ 1.2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 9,840 ಕೋಟಿ ರೂಪಾಯಿ ಹಣವನ್ನ ತಕ್ಷಣವೇ ನೀಡೋದಾಗಿ IMF ಹೇಳಿದೆ. ಈ ಮೂಲಕ ಕಳೆದ ಕೆಲವು ತಿಂಗಳಿನಿಂದ IMFನಿಂದ ಸಾಲ ಪಡೆಯೋಕೆ ಶತಪ್ರಯತ್ನ ಮಾಡ್ತಿದ್ದ ಪಾಕಿಸ್ತಾನಕ್ಕೆ ಫಲಸಿಕ್ಕಿದೆ. ಅಂದ್ಹಾಗೆ ಕಳೆದ ತಿಂಗಳು ಪಾಕಿಸ್ತಾನ ಹಾಗೂ IMF ಸಿಬ್ಬಂದಿ ಮಟ್ಟದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೆ ಈ ಪ್ಯಾಕೇಜ್‌ಗೆ IMF ಎಕ್ಸಿಕ್ಯೂಟಿವ್‌ ಬೋರ್ಡ್‌ ಅನುಮೋದನೆ ನೀಡೋದು ಬಾಕಿಯಿತ್ತು. ಇದೀಗ 9 ತಿಂಗಳ ಅಲ್ಪಾವಧಿ ಸಾಲ ನೀಡೋಕೆ ಕಾರ್ಯನಿರ್ವಾಹಕ ಮಂಡಳಿ ಅನುಮೋದನೆ ನೀಡಿದೆ ಅಂತ IMF ಹೇಳಿದೆ. ಇನ್ನು IMFನಿಂದ ಈ ಆರ್ಥಿಕ ಸಹಾಯ ಪಡಿಯೋಕೆ IMF ಹಾಕಿದ್ದ ಎಲ್ಲಾ ಕಂಡೀಷನ್ಸ್‌ಗೆ ತಲೆ ಆಡಿಸಿತ್ತು. ಅಲ್ದೆ ಟ್ಯಾಕ್ಸ್‌ ಏರಿಸೋ ಮೂಲಕ ಈಗಾಗಲೇ ಹಣದುಬ್ಬರದಿಂದ ತತ್ತರಿಸಿ ಹೋಗಿರೋ ಪಾಕ್‌ ಜನ್ರಿಗೆ ಶಾಕ್‌ ನೀಡಿತ್ತು. ಇದೀಗ ಅಂತೂ ಹಣಕಾಸು ನೆರವು ಸಿಕ್ಕಿದ್ದು, ಸ್ವಲ್ಪಮಟ್ಟಿಗೆ ಪಾಕಿಸ್ತಾನಕ್ಕೆ ರಿಲೀಫ್‌ ಸಿಕ್ಕಂತಾಗಿದೆ. ಇನ್ನೊಂದ್‌ ಕಡೆ IMF ಸಾಲ ಕೊಡೋಕೆ ಒಪ್ಪಿದ್ದೆ ತಡ ಪಾಕಿಸ್ತಾನಕ್ಕೆ ಸಹಾಯ ಮಾಡೋಕೆ ಕೆಲವು ಮುಸ್ಲಿಂರಾಷ್ಟ್ರಗಳು ಮುಂದೆ ಬಂದಿದ್ದು, ಪಾಕ್‌ಗೆ ಹಣದ ಹೊಳೆಯನ್ನ ಹರಿಸುತ್ತಿವೆ. ಯುಎಇ 1 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8,200 ಕೋಟಿ ರೂಪಾಯಿ ಹಣವನ್ನ ನೀಡಿದೆ ಅಂತ ಪಾಕಿಸ್ತಾನ ಹಣಕಾಸು ಸಚಿವ ಇಶಾಕ್‌ದಾರ್‌ ಅನೌನ್ಸ್‌ ಮಾಡಿದ್ದಾರೆ. ಮತ್ತೊಂದ್‌ ಕಡೆ ಸೌದಿ ಅರೇಬಿಯಾ ಕೂಡ 2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 16.4 ಸಾವಿರ ಕೋಟಿ ರೂಪಾಯಿ ಹಣವನ್ನ ಪಾಕ್‌ ಕೇಂದ್ರ ಬ್ಯಾಂಕ್‌ಗೆ ಡೆಪಾಸಿಟ್‌ ಮಾಡಿದೆ ಅಂತ ಇಶಾಕ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply