ಭಾರತದ ಆರ್ಥಿಕತೆ ಈ ವರ್ಷ 6.5% ರೇಟ್‌ನಲ್ಲಿ ಬೆಳೆಯುತ್ತೆ: IMF

masthmagaa.com:

ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್‌ IMF ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನ ಏರಿಕೆ ಮಾಡಿದೆ. ಈ ಹಿಂದೆ ಭಾರತದ ಆರ್ಥಿಕತೆ 2024-25ರ ಹಣಕಾಸು ವರ್ಷದಲ್ಲಿ 6.3%ರ ದರದಲ್ಲಿ ಬೆಳವಣಿಗೆಯಾಗುತ್ತೆ ಅಂತ ಹೇಳಿತ್ತು. ಈಗದನ್ನ 6.5%ಗೆ ಏರಿಕೆ ಮಾಡಿದೆ. 2024ರ ಗ್ಲೋಬಲ್‌ ಎಕನಾಮಿಕ್‌ ಔಟ್‌ಲುಕ್‌ ರಿಪೋರ್ಟ್‌ನಲ್ಲಿ ಈ ವಿಚಾರ ತಿಳಿಸಿದೆ. ದೇಶಿ ಮಾರ್ಕೆಟ್‌ನಲ್ಲಿ ಖರ್ಚು ಮಾಡ್ತಿರೋದು ಹೆಚ್ಚಾಗಿರೋದ್ರಿಂದ ಈ ಏರಿಕೆಯನ್ನ ಅಂದಾಜು ಮಾಡಲಾಗಿದೆ. ಅತ್ತ ಜಾಗತಿಕ ಆರ್ಥಿಕತೆಯ ಬೆಳವಣಿಗೆ ದರವನ್ನ ಕೂಡ 0.2ರಷ್ಟು ಏರಿಕೆ ಮಾಡಿದೆ. 3.1%ನಲ್ಲಿ ಜಾಗತಿಕ ಆರ್ಥಿಕತೆ ಬೆಳವಣಿಗೆ ಅಗುತ್ತೆ ಅಂತ IMF ಹೇಳಿದೆ. ಉಳಿದಂತೆ ಚೀನಾ, ರಷ್ಯಾ, ಬ್ರೆಜಿಲ್‌ ಹಾಗೂ G-7 ರಾಷ್ಟ್ರಗಳ ಬೆಳವಣಿಗೆ ದರ ಕೂಡ ಜಾಸ್ತಿಯಾಗತ್ತೆ ಅಂತ IMF ಹೇಳಿದೆ.

-masthmagaa.com

Contact Us for Advertisement

Leave a Reply