ಹಣಕಾಸು ನೆರವು ನೀಡಲು ಪಾಕ್‌ಗೆ IMF ವಿಧಿಸಿದ ಷರತ್ತುಗಳೇನು? ಇಲ್ನೋಡಿ

masthmagaa.com:

IMFನಿಂದ ಹಣದ ನೆರವಿಗಾಗಿ ಬಕಪಕ್ಷಿಯಂತೆ ಕಾಯ್ತಿರೋ ಪಾಕ್‌ಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಕಠಿಣ ಷರತ್ತುಗಳನ್ನ ಹಾಕಿದೆ. ಸಾಲ ಪಡೆಯಲು ದೇಶದ ಆರ್ಥಿಕತೆಯನ್ನ ಸಮರ್ಪಕವಾಗಿ ಮ್ಯಾನೇಜ್‌ ಮಾಡೊ ಸಾಮರ್ಥ್ಯ ತನಗಿದೆ ಅಂತ ಪಾಕ್‌ ಸರ್ಕಾರ ಮನವರಿಕೆ ಮಾಡಿಕೊಡುವ ಅವಶ್ಯಕತೆ ಬಂದೊದಗಿದೆ. ಇನ್ನು IMF ಹಾಕಿರೋ ಷರತ್ತುಗಳನ್ನ ನೋಡೋದಾದ್ರೆ, ವಿತ್ತೀಯ ಕೊರತೆ ಅಂದ್ರೆ ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಿನ ಅಂತರ ಕಡಿಮೆಯಾಗಬೇಕು ಅನ್ನೊದು IMF ವಿಧಿಸಿರೊ ಅತಿಮುಖ್ಯ ಷರತ್ತಾಗಿದೆ. ಹಾಗೂ ಪ್ರತಿ ಲೀಟರ್‌ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 20ರಿಂದ 30 ಪಾಕಿಸ್ತಾನಿ ರೂಪಾಯಿಗಳ ಹೊಸ ತೆರಿಗೆ ವಿಧಿಸಬೇಕು. ಇದ್ರಿಂದ ಪಾಕ್‌ನಲ್ಲಿ ಈಗಿರುವ 50ರೂಪಾಯಿ ಪೆಟ್ರೋಲ್‌ ದರ 70ರಿಂದ 80 ರೂಪಾಯಿ ಆಗೊ ನಿರೀಕ್ಷೆಯಿದೆ. ಅಲ್ದೇ ಪೆಟ್ರೋಲಿಯಂ ಮೇಲೆ 17% GST ವಿಧಿಸೋ ಷರತ್ತನ್ನ ಪಾಕ್‌ ಸರ್ಕಾರ ಈಗಾಗಲೇ ಒಪ್ಪಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆಯೂ ಅಬಕಾರಿ ಸುಂಕ ಹೆಚ್ಚಿಸುವಂತೆ ಪಾಕಿಸ್ತಾನದ ಕೇಂದ್ರೀಯ ಹಣಕಾಸು ಮಂಡಳಿಗೆ IMF ಸಲಹೆ ನೀಡಿದೆ. ಪಾಕಿಸ್ತಾನದ ನಾಗರಿಕ ಸೇವಾ ಅಧಿಕಾರಿಗಳ ವೇತನ ಮತ್ತು ಇತರ ವಿವರಗಳನ್ನೂ IMF ಕೋರಿದೆ. BS-17ರಿಂದ BS-22ರ ಗ್ರೇಡ್​ಗಳ ನೌಕರರಿಗೆ ಇತರೆಲ್ಲಾ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಮತ್ತು ಸವಲತ್ತು ಇದೆ. ಇದಕ್ಕೆ ಕಡಿವಾಣ ಹಾಕಬೇಕು ಅಂತ ಪರೋಕ್ಷ ಸೂಚನೆ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಇನ್ನು ಹಲವು ಕಂಡೀಶನ್‌ಗಳನ್ನ ಹಾಕಿದ್ದು, ಪಾಕ್‌ ಇವನ್ನ ಒಪ್ಪದೇ ಬೇರೆ ದಾರಿಯಿಲ್ಲ. ಅಲ್ದೇ ಹಾಕಿರೊ ಎಲ್ಲ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ ಬೇಕಿರುವ ಸಾಲ ಸಿಗಲಿದೆ ಅಂತ ಪಾಕ್‌ ಪ್ರಧಾನಿ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply