ಪವರ್‌ ಕಳೆದುಕೊಳ್ತಿದೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ರ ಕನ್ಸರ್ವೇಟಿವ್‌ ಪಾರ್ಟಿ!

masthmagaa.com:

ಪ್ರಧಾನಿ ರಿಷಿ ಸುನಾಕ್‌ ಅವ್ರ ಕನ್ಸರ್ವೇಟಿವ್‌ ಪಾರ್ಟಿ ಬ್ರಿಟನ್‌ ನೆಲದಲ್ಲಿ ತನ್ನ ಪ್ರಭಾವ ಕಳೆದುಕೊಳ್ತಿದೆ ಅಂತ ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ರಿಷಿ ಸುನಾಕ್‌ ಅವ್ರ ಕನ್ಸರ್ವೇಟಿವ್‌ ಪಾರ್ಟಿ ಬಹಳ ಕಠಿಣ ಫೇಸ್‌ನಲ್ಲಿದೆ ಅಂತ ಹೇಳಲಾಗ್ತಿದೆ. ಜೊತೆಗೆ ಈ ಹಿಂದೆ ಕಡಿಮೆ ಅವಧಿಗೆ ಬ್ರಿಟನ್‌ ಪ್ರಧಾನಿಯಾಗಿ ಸೇವೆ ಸಲ್ಲಿಸಿರೋ ಲಿಜ್‌ ಟ್ರಸ್‌ಗಿಂತಲೂ ಕಡಿಮೆ ಜನಪ್ರಿಯತೆಯನ್ನ ಸುನಾಕ್‌ ಹೊಂದಿದ್ದಾರೆ. ಆದ್ರಿಂದ ಮುಂದಿನ 2025ರಲ್ಲಿ ನಡೆಯಲ್ಲಿರೋ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಾರ್ಟಿ ತನ್ನ ಪವರ್‌ ಕಳೆದುಕೊಂಡು ಬ್ರಿಟನ್‌ನ ಲೇಬರ್‌ ಪಾರ್ಟಿ ಮುನ್ನೆಲೆಗೆ ಬರೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply