ಪಾಕ್‌ ಚುನಾವಣೆ ಬಗ್ಗೆ ಅಮೆರಿಕ ಮಾತಾಡಲಿ-ಇಮ್ರಾನ್‌ ಒತ್ತಾಯ!

masthmagaa.com:

ಪಾಕ್‌ನಲ್ಲಿ ನಡೆದ ʻಅಕ್ರಮʼ ಚುನಾವಣೆ ಬಗ್ಗೆ ಅಮೆರಿಕ ಧ್ವನಿ ಎತ್ಬೇಕು ಅಂತ ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಗ್ರಹಿಸಿದ್ದಾರೆ. ಜಗತ್ತಿನಲ್ಲಿ ಅಮೆರಿಕ ಪ್ರಜಾಪ್ರಭುತ್ವದ ಧ್ವನಿಯಂತೆ ವರ್ತಿಸುತ್ತೆ, ಆದ್ರೆ‌ ಈ ಪಾಕಿಸ್ತಾನದ ಎಲೆಕ್ಷನ್‌ ವಿಚಾರವಾಗಿ ಅಮೆರಿಕ ಮತ್ತು ಯುರೋಪ್‌ಗಳು ಮೌನವಾಗಿವೆ. ಹೀಗಾಗಿ ಪಾಕ್‌ನಲ್ಲಿ ನಡೆದಿರೋ ಚುನಾವಣೆ ಬಗ್ಗೆ ಅಮೆರಿಕ ಮಾತಾಡ್ಬೇಕು ಅಂತ ಇಮ್ರಾನ್ ಒತ್ತಾಯಿಸಿದ್ದಾರೆ. ಇನ್ನೊಂದು ಕಡೆ ಇಮ್ರಾನ್‌ ಖಾನ್‌ರ PTI ಪಕ್ಷ ಓಮರ್‌ ಅಯುಬ್‌ ಅವ್ರನ್ನ ತನ್ನ ಪ್ರಧಾನಿ ಅಭ್ಯರ್ಥಿ ಅಂತ ಘೋಷಿಸಿದೆ. ಅಂದ್ಹಾಗೆ ಪಾಕ್‌ ಚುನಾವಣೆಯಲ್ಲಿ 101 ಸ್ಥಾನಗಳನ್ನ ಇಮ್ರಾನ್‌ ಬೆಂಬಲಿಗರು ಗೆದ್ರೂ ಕೂಡ ಅಧಿಕಾರದಿಂದ ದೂರ ಉಳಿದಿದ್ದಾರೆ. ಯಾಕಂದ್ರೆ ನವಾಜ್‌ ಬಣದ ಪಾಕಿಸ್ತಾನ ಮುಸ್ಲಿಂ ಲೀಗ್‌, ಪಾಕಿಸ್ತಾನ ಪಿಪಲ್ಸ್‌ ಪಾರ್ಟಿ ಜೊತೆ ಮೈತ್ರಿ ಮಾಡ್ಕೊಂಡು ಸರ್ಕಾರ ರಚಿಸೊಕೆ ಮುಂದಾಗಿದೆ. ಅಲ್ದೇ ಮಾಜಿ ಪ್ರಧಾನಿ ಶಹಬಾಜ್‌ ಷರೀಫ್‌ರನ್ನ ಈ ಮೈತ್ರಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿತ್ತು. ಈಗ ಇದಕ್ಕೆ ಪ್ರತಿಯಾಗಿ ಇಮ್ರಾನ್‌ ಸೇನೆ ಓಮರ್‌ರನ್ನ ಕಣಕ್ಕಿಳಿಸಿದೆ.

-masthmagaa.com

Contact Us for Advertisement

Leave a Reply