ಕೊನೆಗೂ ಪಾಕ್​ನ ಐಎಸ್​ಐಗೆ ಹೊಸ ಬಾಸ್ ನೇಮಕ!

masthmagaa.com:

ಹಲವು ದಿನಗಳ ವಿವಾದದ ಬಳಿಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ನದೀಂ ಅಹ್ಮದ್ ಅಂಜುಮ್​ರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್​, ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮತ್ತು ಐಎಸ್​ಐ ಸೆಕ್ರೆಟರಿಯೇಟ್​​​​​​​​ಗಳನ್ನು ಭೇಟಿಯಾಗಿದ್ರು. ಇದ್ರ ಬೆನ್ನಲ್ಲೇ ನದೀಂ ಅಹ್ಮದ್ ಅಂಜುಮ್ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಇದಕ್ಕೂ ಮುನ್ನ ಐಎಸ್​ಐ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್​​​ರನ್ನು ಬದಲಿಸಲು ಇಮ್ರಾನ್ ಖಾನ್ ವಿರೋಧ ವ್ಯಕ್ತಪಡಿಸಿದ್ರು.

-masthmagaa.com

Contact Us for Advertisement

Leave a Reply