ಚೀನಾ ಲಸಿಕೆ ಪಡೆದ ಇಮ್ರಾನ್‌ ಖಾನ್‌ಗೆ ಕೊರೋನಾ!

masthmagaa.com:

2 ದಿನಗಳ ಹಿಂದಷ್ಟೇ ಲಸಿಕೆ ಹಾಕಿಸಿಕೊಂಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್​​​​​ಗೆ ಕೊರೋನಾ ಅಟಕಾಯಿಸಿಕೊಂಡಿದೆ. ಸದ್ಯ ಕ್ವಾರಂಟೈನ್​ನಲ್ಲಿದ್ದು ಚಿಕಿತ್ಸೆ ಪಡೀತಾ ಇದ್ದಾರೆ ಅಂತ ಫೈಸಲ್ ಸುಲ್ತಾನ್ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಮೊದಲ ಹಂತದ ಲಸಿಕೆ ಅಭಿಯಾನ ನಡೀತಾ ಇದೆ. ಇದ್ರಲ್ಲಿ ಚೀನಾ ನೀಡಿರೋ ಫ್ರೀ ಲಸಿಕೆಗಳನ್ನು ಬಳಸಿಕೊಳ್ಳಲಾಗ್ತಿದೆ. ಇಮ್ರಾನ್ ಖಾನ್ ಕೂಡ ಇದೇ ಚೀನಾದ ಲಸಿಕೆಯನ್ನು ಸಿನೋಫಾರ್ಮ್​ ಲಸಿಕೆಯನ್ನು ಹಾಕಿಸಿಕೊಂಡಿದ್ರು. ಆದ್ರೆ ಎರಡೇ ದಿನಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೋನಾ ಬಂದಿದೆ..

ಈ ನಡುವೆ ಚೀನಾ ಭಾರತ ಸೇರಿದಂತೆ 19 ರಾಷ್ಟ್ರಗಳಿಂದ ಬರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಚೀನಾದಿಂದ ಉತ್ಪಾದಿಸಲಾದ ಕೊರೋನಾ ಲಸಿಕೆಯನ್ನೇ ಹಾಕಿಸಿಕೊಂಡಿರಬೇಕು ಅಂತ ಆದೇಶಿಸಿತ್ತು. ಈ ಬಗ್ಗೆ ಭಾರತದಲ್ಲಿರೋ ಚೀನಾ ರಾಯಭಾರಿ ಕಚೇರಿಯಿಂದ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಚೀನಾದ ಲಸಿಕೆ ಹಾಕಿಸಿಕೊಳ್ಳುವವರಿಗೆ ಸರ್ಟಿಫಿಕೇಟ್ ಕೂಡ ನೀಡೋದಾಗಿ ಉಲ್ಲೇಖಿಸಲಾಗಿತ್ತು. ಆದ್ರೆ ಇಲ್ಲಿ ಒಂದು ಸಮಸ್ಯೆ ಎದುರಾಗಿತ್ತು. ಅದೇನೆಂದ್ರೆ ಚೀನಾದ ಕೊರೋನಾ ಲಸಿಕೆ ಭಾರತದಲ್ಲಿ ಅಪ್ರೂವ್ ಆಗೇ ಇಲ್ಲ. ಹೀಗಿರುವಾಗ ಭಾರತದಲ್ಲಿ ಚೀನಾ ಲಸಿಕೆ ಹಾಕೋದು ಹೇಗೆ ಅನ್ನೋ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಈ ಬಗ್ಗೆ ಮತ್ತೆ ಪರಿಶೀಲನೆ ನಡೆಸುತ್ತೇವೆ ಅಂತ ಚೀನಾ ತಿಳಿಸಿದೆ.

-masthmagaa.com

Contact Us for Advertisement

Leave a Reply