ಪಾಕಿಸ್ತಾನದಲ್ಲಿ ಹೆಚ್ಚಾಗ್ತಿದ್ಯಾ ಸೇನೆಯ ಹಾವಳಿ?

masthmagaa.com:

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​​​ಗೆ ಒಂದ್ರ ಮೇಲೊಂದು ಸಂಕಷ್ಟ ಬರ್ತಾನೇ ಇದೆ. ಒಂದ್ಕಡೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದು, ಮತ್ತೊಂದ್ಕಡೆ ಈಗ ಸೇನೆ ಕೂಡ ತಿರುಗಿಬಿದ್ದಿದೆ. ಪಾಕಿಸ್ತಾನದಲ್ಲಿ ಸರ್ಕಾರ ಬರೋದು, ಹೋಗೋದು ಎಲ್ಲವೂ ಸೇನೆಯ ಕೈಯ್ಯಲ್ಲೇ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಮೇಲ್ನೋಟಕ್ಕೆ ಪ್ರಜಾಪ್ರಭುತ್ವದ ಆಟ ಆಡ್ತಿರೋ ಸೇನೆ, ಒಳಗಿಂದೊಳಗೆ ಎಲ್ಲವನ್ನೂ ನಿಯಂತ್ರಿಸುತ್ತಿದೆ. ಈ ಹಿಂದೆ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಕೂಡ ಸೇನೆ ಸಪೋರ್ಟ್​​ನಿಂದ ಅಂತ ಹೇಳಲಾಗುತ್ತೆ. ಆದ್ರೆ ಇತ್ತೀಚೆಗೆ ಖೈಬರ್ ಪ್ರಖ್ತುಂಕ್ವಾದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್​​ಸಾಫ್ ಪಕ್ಷ ಸೋತು ಹೋಗಿದೆ. ಇದನ್ನು ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥರ ನಡುವೆ ಕೆಲ ದಿನಗಳ ಹಿಂದೆ ನಡೆದ ಶೀತಲ ಸಮರಕ್ಕೆ ತಾಳೆ ಹಾಕಿ ನೋಡಲಾಗ್ತಿದೆ. ಐಎಸ್​ಐ ಮುಖ್ಯಸ್ಥರ ಬದಲಾವಣೆ ವಿಚಾರದಲ್ಲಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ನಡುವೆ ವೈಮನಸ್ಸು ಮೂಡಿತ್ತು. ಈ ಹಿಂದೆ ಐಎಸ್​ಐ ಮುಖ್ಯಸ್ಥರಾಗಿದ್ದ ಫೈಜ್ ಹಮೀದ್​ರನ್ನೇ ಮುಂದುವರಿಸಬೇಕು ಅಂತ ಖಾನ್ ಪಟ್ಟು ಹಿಡಿದ್ರೆ, ಬಜ್ವಾ ಐಎಸ್​ಐಗೆ ಲೆಫ್ಟಿನೆಂಟ್ ಜನರಲ್​​​ ನದೀಮ್ ಅಹ್ಮದ್ ಅಂಜುಮ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಇದ್ರ ಬೆನ್ನಲ್ಲೇ ಸ್ಥಳೀಯ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಸೋತಿದೆ.

-masthmagaa.com

Contact Us for Advertisement

Leave a Reply