ಹೆಚ್​ಐವಿ ಬಂದು ಚಿಕಿತ್ಸೆ ಇಲ್ಲದೇ 2ನೇ ರೋಗಿ ಗುಣಮುಖ!

masthmagaa.com:

ವಿಶ್ವದ 2ನೇ ಹೆಚ್​ಐವಿ ರೋಗಿಯ ದೇಹದಲ್ಲಿ ಯಾವುದೇ ಔಷಧ ಇಲ್ಲದೇ ವೈರಾಣು ಮಾಯವಾಗಿದೆ ಅಂತ ತಜ್ಞರು ತಿಳಿಸಿದ್ದಾರೆ. ಅನಲ್ಸ್​ ಆಫ್ ಇಂಟರ್​​ನಲ್ ಮೆಡಿಸಿನ್ ಅನ್ನೋ ಜರ್ನಲ್​​ನಲ್ಲಿ ಈ ವರದಿ ಪ್ರಕಟಿಸಲಾಗಿದೆ. ಈ ರೋಗಿಗೆ ವಿಜ್ಞಾನಿಗಳು ಎಸ್ಪೆರೇಂಜಾ ಪೇಶೆಂಟ್​​ ಅಂತ ಹೆಸರಿಟ್ಟಿದ್ದಾರೆ. ಇವರ ದೇಹದ 150 ಕೋಟಿಗೂ ಅಧಿಕ ರಕ್ತ ಕಣ ಮತ್ತು ಜೀವಕೋಶಗಳ ವಿಶ್ಲೇಷಣೆ ನಡೆಸಲಾಗಿದೆ. ಆದ್ರೆ ಅದ್ರಲ್ಲಿ ಹೆಚ್​​ಐವಿ ಜಿನೋಮ್​ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ ಎಸ್ಪೆರೇಂಜಾ ದೇಹ ಹೆಐವಿಯನ್ನು ತನ್ನಿಂತಾನೆ ಅಂತ್ಯಗೊಳಿಸಿದೆ ಅಂತ ತಜ್ಞರು ಹೇಳಿದ್ದಾರೆ. ಜೊತೆಗೆ ಇದು ಯಾವ ರೀತಿಯ ರೋಗ ನಿರೋಧಕ ವ್ಯವಸ್ಥೆಯಿಂದ ಸಾಧ್ಯವಾಗಿದೆ ಅಂತ ಗೊತ್ತಾದ್ರೆ, ಬೇರೆ ರೋಗಿಗಳಿಗೂ ಈ ವ್ಯವಸ್ಥೆಯನ್ನು ಕಾಪಿ ಮಾಡ್ಬೋದು ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಈ ಸೋಂಕು ತಗುಲಿದಾಗ ಈ ವೈರಾಣು ತನ್ನ ಗಿನೋಮ್​​ನ್ನು ಡಿಎನ್​​ಎ ಜೀವಕೋಶಗಳಲ್ಲಿ ಕಾಪಿ ಮಾಡುತ್ತೆ. ಜೀವಕೋಶಗಳನ್ನೇ ವೈರಾಣು ಉತ್ಪತ್ತಿ ಮಾಡೋ ಫ್ಯಾಕ್ಟರಿ ರೀತಿ ಮಾಡ್ಬಿಡುತ್ತೆ. ನಂತರ ಅಲ್ಲಿಂದ ಹೊಸ ಹೊಸ ಹೆಚ್​ಐವಿ ವೈರಾಣುಗಳನ್ನು ಹೊರಸೂಸುತ್ತೆ. ಈ ಮೂಲಕ ದೇಹದ ವ್ಯವಸ್ಥೆಯನ್ನೇ ಹಾಳು ಮಾಡೋಕೆ ಶುರು ಮಾಡುತ್ತೆ. ಇದು ಜೀವಕೋಶಗಳಿಂದ ಹೊಸ ವೈರಾಣು ಬಿಡುಗಡೆಯಾಗೋದ್ರಿಂದ ಔಷಧ ಮತ್ತು ದೇಹದ ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುತ್ತೆ. ಆ್ಯಂಟಿ ರೆಟ್ರೋವೈರಲ್ ಥೆರಪಿ ದೇಹದಲ್ಲಿ ಹೆಚ್​​​ಐವಿ ನಿರ್ಮಿಸಿದ ಫ್ಯಾಕ್ಟರಿಯಿಂದ ಬಿಡುಗಡೆಯಾಗೋ ಹೊಸ ವೈರಾಣುಗಳನ್ನು ತಡೆಯುತ್ತೆ. ಆದ್ರೆ ಜೀವಕೋಶದ ಒಳಗಿರೋ ಫ್ಯಾಕ್ಟರಿ ಅಂದ್ರೆ ಹೊಸ ಕಾಪಿ ಬಿಡುಗಡೆಯಾಗೋ ಜಾಗದ ಮೇಲೆ ಈ ಥೆರಪಿ ಯಾವುದೇ ಪರಿಣಾಮ ಬೀರೋದಿಲ್ಲ. ಆದ್ರೆ ಅಪರೂಪದ ರೋಗಿಗಳಲ್ಲಿ ಮಾತ್ರವೇ ರೋಗ ನಿರೋಧಕ ವ್ಯವಸ್ಥೆ ಯಾವುದೇ ಔಷಧಿ ಇಲ್ಲದೇ ಹೆಚ್​​ಐವಿಯನ್ನು ಮಟ್ಟ ಹಾಕುತ್ತವೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಈಗ ಔಷಧವಿಲ್ಲದೇ ಗುಣಮುಖರಾಗಿರೋ ರೋಗಿ 2ನೆಯವರಾಗಿದ್ದಾರೆ. ಈ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೋಗಿಯೊಬ್ಬರು ಚಿಕಿತ್ಸೆ ಇಲ್ಲದೇ ಗುಣಮುಖರಾಗಿದ್ರು.

-masthmagaa.com

Contact Us for Advertisement

Leave a Reply