ನಿರುದ್ಯೋಗ ಪ್ರಮಾಣ: ನಮ್ಮ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

masthmagaa.com:

ನಮ್ಮ ದೇಶವನ್ನ ಕಾಡ್ತಿರೋ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಒಂದು. ಹಾಗಿದ್ರೆ ಅತಿಹೆಚ್ಚು ನಿರುದ್ಯೋಗ ಪ್ರಮಾಣ ಇರೋದು ಯಾವ ರಾಜ್ಯದಲ್ಲಿ ಎಲ್ಲಿ, ಅತಿಕಮ್ಮಿ ಇರೋದೆಲ್ಲಿ ಗೊತ್ತಾ.. ಅಂದ್ಹಾಗೆ ನಿರುದ್ಯೋಗ ಪ್ರಮಾಣಕ್ಕೆ ಸಂಬಂಧಿಸಿದಂತೆ ಸೆಂಟರ್​ ಫಾರ್​ ಮಾನಿಟರಿಂಗ್ ಇಂಡಿಯನ್​ ಎಕಾನಮಿ – CMIE ಪ್ರತಿದಿನ, ಪ್ರತಿ ವಾರ, ಪ್ರತಿ ತಿಂಗಳು, ಪ್ರತಿವರ್ಷ ಅಂಕಿ ಅಂಶವನ್ನ ಮೆಂಟೇನ್ ಮಾಡುತ್ತೆ. ಅದು ಬಿಡುಗಡೆ ಮಾಡಿರೋ ರಿಪೋರ್ಟ್​ ಪ್ರಕಾರ ಆಗಸ್ಟ್​​ನಲ್ಲಿ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಅತಿಹೆಚ್ಚು ನಿರುದ್ಯೋಗ ಪ್ರಮಾಣ ಇತ್ತು. ಹರಿಯಾಣದಲ್ಲಿ 35 ಪರ್ಸೆಂಟ್​, ರಾಜಸ್ಥಾನದಲ್ಲಿ 26 ಪರ್ಸೆಂಟ್​​. ಅದ್​​ಬಿಟ್ರೆ ಜಾರ್ಖಂಡ್​, ತ್ರಿಪುರ, ಜಮ್ಮು-ಕಾಶ್ಮೀರ, ಬಿಹಾರ, ಗೋವಾ ಮತ್ತು ದೆಹಲಿ – 10 ಪರ್ಸೆಂಟ್​ಗೂ ಹೆಚ್ಚು ನಿರುದ್ಯೋಗ ಪ್ರಮಾಣ ಹೊಂದಿವೆ. ಕರ್ನಾಟಕದಲ್ಲಿ 1.5 ಪರ್ಸೆಂಟ್​ – ತುಂಬಾ ಕಮ್ಮಿ ನಿರುದ್ಯೋಗ ಪ್ರಮಾಣ ಇದೆ ಅಂತ ಈ ರಿಪೋರ್ಟ್​ ಹೇಳಿದೆ. ಸಿಕ್ಕಿಂನಲ್ಲಿ ಝೀರೋ ಪರ್ಸೆಂಟ್ ಇದೆ. ಓವರಾಲ್​ ದೇಶದಲ್ಲಿ 8.2 ಪರ್ಸೆಂಟ್​ ಇತ್ತು. ಇದರಲ್ಲಿ ನಗರ ಪ್ರದೇಶದಲ್ಲಿ 9.78 ಪರ್ಸೆಂಟ್​, ಗ್ರಾಮೀಣ ಪ್ರದೇಶದಲ್ಲಿ 7.64 ಪರ್ಸೆಂಟ್​ ನಿರುದ್ಯೋಗ ಪ್ರಮಾಣ ಇದೆ.

-masthmagaa.com

Contact Us for Advertisement

Leave a Reply