ಪಾಕಿಸ್ತಾನದಲ್ಲಿ ಅಡುಗೆ ಎಣ್ಣೆ ಲೂಟಿ ಮಾಡಿದ ಕಳ್ಳರು! 3 ಜನರ ಬಂಧನ!

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರೋ ಪಾಕಿಸ್ತಾನ ಇಂಧನ ಕೊರತೆಯಿಂದ ತನ್ನ ಎಲ್ಲಾ ಮಿಲಿಟರಿ ಸೇನಾಭ್ಯಾಸಗಳನ್ನ ಕ್ಯಾನ್ಸಲ್‌ ಮಾಡಿದೆ ಅಂತ ವರದಿಯಾಗಿತ್ತು. ಇದೀಗ ಓರ್ವ ಪೊಲೀಸ್‌ ಸೇರಿದಂತೆ 5 ಜನರು, ಪೊಲೀಸ್‌ ವ್ಯಾನ್‌ನಲ್ಲೇ ಅಡುಗೆ ಎಣ್ಣೆಯನ್ನ ಕದ್ದಿರೋ ಘಟನೆ ಕರಾಚಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನ ಬಂಧಿಸಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಅರೆಸ್ಟ್‌ ಆದೋರಲ್ಲಿ ಗೋಡೌನ್‌ ಒಂದರ ಓನರ್‌, ಅದ್ರ ವರ್ಕರ್‌ ಹಾಗೂ ಓರ್ವ ಪೊಲೀಸ್‌ ಸಿಬ್ಬಂದಿ ಸೇರಿದ್ದಾರೆ. ಅಡುಗೆ ಎಣ್ಣೆಯನ್ನ ಜಿಲ್ಲಾ ಕೇಂದ್ರಕ್ಕೆ ಸಾಗಿಸುತ್ತಿದ್ದ ಟ್ರಕ್‌ನಿಂದ ಪೊಲೀಸ್‌ ವ್ಯಾನ್‌ ಬಳಸಿ ಕದೀತಾ ಇದ್ರು. ನಂತ್ರ ಈ ಕದ್ದ ಎಣ್ಣೆಯನ್ನ ಆರೋಪಿ ಗೋಡೌನ್‌ನಲ್ಲಿ ಬಚ್ಚಿಡ್ತಾ ಇದ್ರು ಅಂತ ಪೋಲಿಸರು ಹೇಳಿದ್ದಾರೆ. ಅಂದ್ಹಾಗೆ ಈ ಖದೀಮರ ಗ್ಯಾಂಗ್‌ನ ಇಬ್ಬರನ್ನ ಕಳೆದ ತಿಂಗಳು ಬಂಧಿಸಿದ್ದು, ಆವಾಗ್ಲೂ ಇದೇ ರೀತಿ ಸಾಕಷ್ಟು ರಾಬರಿಗಳನ್ನ ಮಾಡಿದ್ರು ಅಂತ ಗೊತ್ತಾಗಿದೆ. ಇನ್ನು ಹಣದುಬ್ಬರ, ಭಯೋತ್ಪಾದನೆ ಹಾಗೂ ರಾಜಕೀಯ ಅಸ್ಥಿರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನ ಪಾಕಿಸ್ತಾನ ಫೇಸ್‌ ಮಾಡ್ತಿದೆ. ಜೊತೆಗೆ IMF ನಿಂದ ಸಾಲ ಪಡೆಯೋಕೆ IMF ಹಾಕಿರೋ ಎಲ್ಲಾ ಕಂಡೀಷನ್‌ಗೆ ಒಪ್ಪಿಕೊಂಡಿದ್ದು, ಟ್ಯಾಕ್ಸ್‌ ಕೂಡ ಹೈಕ್‌ ಮಾಡಿದೆ. ಹೀಗಾಗಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರು ಸಾಕಷ್ಟು ತೊಂದ್ರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಪಾಕ್‌ನಲ್ಲಿ ಕ‍ಳ್ಳತನದ ಕೇಸ್‌ಗಳು ಕೂಡ ಹೆಚ್ಚಾಗುತ್ತಿವೆ.

-masthmagaa.com

Contact Us for Advertisement

Leave a Reply