ಕಮಲಾ ಹ್ಯಾರಿಸ್‌ರನ್ನ ʻಪ್ರೆಸಿಡೆಂಟ್‌ʼ ಮಾಡಿದ ಜೋ ಬೈಡನ್‌! ಇದೆಂಥಾ ಅರಳು ಮರಳು?

masthmagaa.com:

ಏನಾದರೂ ಒಂದು ಗೊಂದಲದ ಕೆಲಸ ಅಥವಾ ಹೇಳಿಕೆ ಮೂಲಕ ಟೀಕೆಗೆ ಗುರಿಯಾಗೋ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಮತ್ತೊಮ್ಮ ಸೋಶಿಯಲ್‌ ಮೀಡಿಯಾದ ಶಿಕಾರಿಯಾಗಿದ್ದಾರೆ. ಅಮೆರಿಕದ ವೈಟ್‌ ಹೌಸ್‌ನಲ್ಲಿ ನಡೆದ ಈವೆಂಟ್‌ವೊಂದ್ರಲ್ಲಿ ಜೋ ಬೈಡನ್‌ ಅವ್ರು ವೈಸ್‌ ಪ್ರೆಸಿಡೆಂಟ್‌ನ್ನ ಪ್ರೆಸಿಡೆಂಟ್‌ ಅಂತ ಕರೆದು ಮುಜುಗರಕ್ಕೀಡಾಗಿದ್ದಾರೆ. ಈ ಈವೆಂಟ್‌ನಲ್ಲಿ ಅಮೆರಿಕ ವೈಸ್‌ ಪ್ರೆಸಿಡೆಂಟ್‌ ಕಮಲ ಹ್ಯಾರಿಸ್‌ ಅವ್ರನ್ನ ಇಂಟ್ರಡ್ಯುಸ್‌ ಮಾಡೋ ವೇಳೆ ಪ್ರೆಸಿಡೆಂಟ್‌ ಹ್ಯಾರಿಸ್‌ ಅಂತ ಕರೆದಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ತಿದ್ದಾಗೆ, ಬೈಡನ್‌ ಅವ್ರನ್ನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗಿದೆ. ಅಂದ್ಹಾಗೆ ಬೈಡನ್‌ ಈ ರೀತಿ ಕನ್‌ಫ್ಯೂಸ್‌ ಆಗಿ ಮಾತನಾಡಿರೋ ಘಟನೆ ಇದೇನೂ ಮೊದಲಲ್ಲ. ಹಲವು ಸಾರ್ವಜನಿಕ ಸಭೆಗಳಲ್ಲಿ ಬೈಡನ್‌ ಉಲ್ಟಪಲ್ಟವಾಗಿ ಮಾತನಾಡಿದ್ದಾರೆ. 2022 ರಲ್ಲಿ ಕಮಲ ಹ್ಯಾರಿಸ್‌ ಅವ್ರ ಹುಟ್ಟು ಹಬ್ಬದ ಸಂದರ್ಭದಲ್ಲೂ, ಇದೇ ರೀತಿ ʻಗ್ರೇಟ್‌ ಪ್ರೆಸಿಡೆಂಟ್‌ʼ ಅಂತ ಕರೆದಿದ್ರು. ಅಷ್ಟೆ ಅಲ್ದೆ ಕೆಲ ದಿನಗಳ ಹಿಂದಷ್ಟೇ ಬೈಡನ್‌ , ಅಮೆರಿಕದ ಸಮಾರಂಭವೊಂದರ ಪುಷ್ಪಾರ್ಚನೆ ವೇಳೆ ತೀರ ಗೊಂದಲದಲ್ಲಿದ್ರು. ಹೂಮಾಲೆಯನ್ನ ಅರ್ಪಿಸೋದಕ್ಕೂ ಅಲ್ಲೇ ಇರೋ ಗಾರ್ಡ್‌ ಸಹಾಯ ಮಾಡ್ಬೇಕಾಯ್ತು. ಒಮ್ಮೆ ಹಿಂದಕ್ಕೆ ಹೋಗಿ, ಮುಂದಕ್ಕೆ ಬರ್ತಾ ಇರೋ ಬೈಡನ್‌ಗೆ, ಎಲ್ಲಿ ಹೋಗಿ ನಿಂತ್ಕೋಬೇಕಂತ ಅಲ್ಲಿನ ಮಿಲಿಟರಿ ಅಧಿಕಾರಿ ನಿರ್ದೇಶನ ನೀಡ್ಬೇಕಾಯ್ತು. ಅಂದ್ಹಾಗೆ ಇತ್ತೀಚಗೆ ಅಮೆರಿಕ ಅಧ್ಯಕ್ಷರ ಅರಳು ಮರಳು ದಿನ ಕಳೆದಂತೆ ಜಾಸ್ತಿಯಾಗ್ತಿದೆ.

-masthmagaa.com

Contact Us for Advertisement

Leave a Reply