ಉತ್ತರ ಕೊರಿಯಾದಲ್ಲಿ ಕೊರೊನಾ ಆರ್ಭಟ: ದಾಯಾದಿಯಿಂದ ಬಂತು ಆಫರ್!

masthmagaa.com:

ಇಷ್ಟು ದಿನ ಕೊವಿಡ್‌ ಮುಕ್ತ ಅಂತ ಬೊಬ್ಬೆ ಹೊಡೆಯುತ್ತಾ, ತನ್ನ ನಾಗರೀಕರಿಗೆ ಲಸಿಕೆ ಹಾಕಿಸಿಕೊಳ್ಳೋದಕ್ಕೂ ಬಿಡದ ಕಿಮ್‌ನ ಉತ್ತರ ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ ತಪ್ಪಿರೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಕೊರೊನಾ ಲಕ್ಷಣಗಳಿಂದ ಆಸ್ಪತ್ರೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದ್ದು ನಾರ್ಥ್‌ ಕೊರಿಯಾ ಈಗ ಕೊವಿಡ್‌ ಹಾಟ್ಸ್ಪಾಟ್‌ ಆಗಿ ರೂಪುಗಳ್ಳುವ ಎಲ್ಲಾ ಸಾದ್ಯತೆ ಇದೆ. ಯಾಕಂದ್ರೆ ನಿನ್ನೆ ಒಂದೇ ದಿನ ವಿಪರೀತ ಜ್ವರದಿಂದ ಸುಮಾರು 3 ಲಕ್ಷಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದು ಈ ಮೂಲಕ ಕೊವಿಡ್‌ ಪತ್ತೆಯಾದ ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಸುಮಾರು 12 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೇ ಭಾನುವಾರ ಕೂಡ15 ಜನ ಮೃತಪಟ್ಟಿದ್ದು ಕೊರೊನಾ ಶಂಕಿತ ಸಾವುಗಳ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಇತ್ತ ಕೊವಿಡ್‌ ಈ ಪರಿ ಹರಡ್ತಿರೋದಕ್ಕೆ ಬೆಕ್ಕಸ ಬೆರಗಾಗಿರೋ ಕಿಮ್‌, ಇದು ತುಂಬಾ ಸಂಕಷ್ಟದ ಸಮಯ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ದೇ ಕೊವಿಡ್‌ ಔಷಧಗಳ ತುರ್ತು ಸರಬರಾಜು ಮಾಡೋದಕ್ಕೆ ಸೇನೆಯನ್ನ ಕೂಡ ನಿಯೋಜಿಸಿದ್ದಾರೆ. ಇನ್ನೊಂದು ಇಂಟರಸ್ಟಿಂಗ್‌ ವಿಚಾರ ಅಂದ್ರೆ ಇಷ್ಟು ದಿನದಿಂದ ಮಾಸ್ಕ್‌ಗೂ ನನಗೂ ಸಂಬಂಧವೇ ಇಲ್ಲ ಅಂತಿದ್ದ ಕಿಮ್‌ ಈಗ ತಾವು ನಡೆಸ್ತಿರೋ ಪ್ರತಿ ಮೀಟಿಂಗ್ ಗಳಿಗೂ ಕೂಡ ಮಾಸ್ಕ್‌ ಇಲ್ಲದೇ ಹೊರಗಡೆನೇ ಬರ್ತಾಯಿಲ್ಲ ಅಂತ ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ. ಇನ್ನು ಇಷ್ಟೆಲ್ಲಾ ಕ್ರಮ ಕೈಗೊಂಡ್ರು ಕೂಡ ಕೊರಿಯಾದಲ್ಲಿ ಕೊವಿಡ್‌ ಚೈನ್‌ ಬ್ರೇಕ್‌ ಮಾಡೋದು ಅಷ್ಟು ಸುಲಭವಲ್ಲ ಅಂತ ಹೇಳಲಾಗ್ತಿದೆ. ಯಾಕಂದ್ರೆ ಉತ್ತರ ಕೊರಿಯಾದಲ್ಲಿ ಕೊರೊನಾ ಟೆಸ್ಟಿಂಗ್‌ ಕಿಟ್‌ಗಳಾಗಲೀ, ಉಪಯುಕ್ತ ಔಷಧಗಳಾಗಲೀ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ ಹೀಗಾಗಿ ಅವರನ್ನ ಗುರುತಿಸಿ ಚಿಕಿತ್ಸೆ ಕೊಡೋದು ತುಂಬಾ ಕಷ್ಟ ಅಂತ ಮೂಲಗಳು ತಿಳಿಸ್ತಾಇವೆ. ಇದರ ಬೆನ್ನಲ್ಲೇ ಕಿಮ್‌ ದೇಶಕ್ಕೆ ದಾಯಾದಿ ದಕ್ಷಿಣ ಕೊರಿಯಾದಿಂದ ಸಹಾಯ ಹಸ್ತದ ಭರವಸೆ ಸಿಕ್ಕಿದ್ದು ಕೊವಿಡ್‌ ಕಂಟ್ರೋಲ್‌ ಮಾಡೋಕೆ ಹೆಲ್ಪ್‌ ಮಾಡ್ತೀವಿ ಅಂತ ಹೇಳಿದೆ. ಈ ಬಗ್ಗೆ ಮಾತನಾಡಿರೋ ದಕ್ಷಿಣ ಕೊರಿಯಾದ ಹೊಸ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌ ʻಅವರೇನಾದ್ರೂ ಒಪ್ಪಿಕೊಂಡ್ರೆ ನಾವು ಅಲ್ಲಿ ಉಂಟಾಗಿರೋ ಕೊರೊನಾ ಸಂಕಷ್ಟವನ್ನ ಪರಿಹಾರ ಮಾಡೋಕೆ ಹೆಲ್ಪ್‌ ಮಾಡೋಕೆ ರೆಡಿ ಇದ್ದೀವಿ. ಲಸಿಕೆ, ಆರೋಗ್ಯ ಸಿಬ್ಬಂದಿ ಸೇರಿ ಎಲ್ಲಾ ರೀತಿಯ ಸಹಾಯವನ್ನೂ ಒದಗಿಸ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply