masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜೋರಾಗೇ ಏಳುವ ಲಕ್ಷಣ ಕಾಣ್ತಿದೆ. ಕಳೆದ ವರ್ಷ ಇದೇ ಟೈಮಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಸೋಂಕಿತರ ಸಂಖ್ಯೆ ಈಗ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 26,291 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 118 ಸೋಂಕಿತರು ಮೃತಪಟ್ಟಿದ್ಧಾರೆ. ಈ ವರ್ಷ ದೃಢಪಟ್ಟ ಅತಿಹೆಚ್ಚು ಕೇಸ್ ಇದು. ಹಲವು ದಿನಗಳಿಂದ ಹೆಚ್ಚೆಚ್ಚು ಕೊರೋನಾ ಕೇಸ್ ದೃಢಪಡುತ್ತಿರೋ ಹಿನ್ನೆಲೆ ಸಕ್ರಿಯ ಪ್ರಕರಣ ಕೂಡ ಹೆಚ್ಚಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 2.19 ಲಕ್ಷಕ್ಕೆ ಏರಿಕೆಯಾಗಿದೆ. ಹಾಗಿದ್ರೆ ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ಮಾಡ್ತಿರೋದಕ್ಕೆ ಹೆಚ್ಚೆಚ್ಚು ಕೊರೋನಾ ಕೇಸಸ್ ಬರ್ತಿದಿಯಾ ಅಂದ್ರೆ.. ಇಲ್ಲ.. ಯಾಕಂದ್ರೆ ಕೊರೋನಾ ಪರೀಕ್ಷೆಯಲ್ಲಿ ಭಾರಿ ಏನು ಬದಲಾವಣೆ ಮಾಡಿಲ್ಲ. ಪ್ರತಿದಿನ 10,000 ಕೊರೋನಾ ಪ್ರಕರಣ ವರದಿಯಾಗ್ತಿದ್ದಾಗ 6ರಿಂದ 7 ಲಕ್ಷ ಪರೀಕ್ಷೆ ಮಾಡಲಾಗ್ತಿತ್ತು. ಕಳೆದ 24 ಗಂಟೆಯಲ್ಲಿ 26,000 ಪ್ರಕರಣ ದೃಢಪಟ್ಟಿದೆಯಲಾ.. ಸೋ ನಿನ್ನೆ, ಮೊನ್ನೆ ಮಾಡಿದ ಪರೀಕ್ಷೆ 7ರಿಂದ 8 ಲಕ್ಷ ಅಷ್ಟೇ. ಸೋ ಕೊರೋನಾ ಪ್ರಕರಣ ಹೆಚ್ಚಾಗೋದಕ್ಕೆ ಹೆಚ್ಚೆಚ್ಚು ಪರೀಕ್ಷೆಗಳನ್ನ ಮಾಡ್ತಿರೋದು ಕಾರಣವಲ್ಲ ಅನ್ನೋದು ಇಲ್ಲಿ ಸ್ಪಷ್ಟ. ಸೋ ಎಲ್ಲರೂ ನಿರ್ಲಕ್ಷ್ಯ ವಹಿಸದೇ, ಮುಂಜಾಗ್ರತೆ ವಹಿಸೋದು ಉತ್ತಮ. ಇಲ್ಲಾಂದ್ರೆ  ಕಂಟ್ರೋಲ್​ ಆಗಿರೋ ಕೊರೋನಾ ಕೈ ಮೀರಿ ಹೋದ್ರೆ ಮತ್ತೇನೂ ಮಾಡಕ್ಕಾಗೊಲ್ಲ ಅನ್ನೋದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಮಹಾರಾಷ್ಟ್ರದಲ್ಲಿ ನಿನ್ನೆ 16 ಸಾವಿರಕ್ಕೂ ಹೆಚ್ಚು ಕೇಸ್ ವರದಿಯಾಗಿದೆ. ಡಿಸ್ಚಾರ್ಜ್ ಆಗಿರೋದು ಬರೀ 8 ಸಾವಿರ ಚಿಲ್ರೆ. ಕರ್ನಾಟಕದಲ್ಲೂ ಕಳೆದ ಹಲವು ದಿನಗಳಿಂದ ಸೋಂಕಿತರ ಸಂಖ್ಯೆ ಜಾಸ್ತಿಯಾಗ್ತಾನೇ ಹೋಗ್ತಿದೆ.

-masthmagaa.com

Contact Us for Advertisement

Leave a Reply