ಫಿಲಿಪೈನ್ಸ್‌ ವಿಚಾರವಾಗಿ ಶುರುವಾಯ್ತು ಭಾರತ ಚೀನಾ ಮಾತಿನ ಯುದ್ಧ!

masthmagaa.com:

ಚೀನಾ ಹಾಗೂ ಫಿಲಿಫೈನ್ಸ್‌ ನಡುವೆ ಉದ್ವಿಗ್ನತೆ ಜಾಸ್ತಿ ಆಗಿರೋ ಹೊತ್ತಲ್ಲೇ ಆ ಜಗಳಕ್ಕೆ ಈಗ ಭಾರತ ಎಂಟ್ರಿ ಕೊಟ್ಟಿದೆ. ಮೊನ್ನೆ ದಕ್ಷಿಣ ಚೀನಾ ಸಮುದ್ರದಲ್ಲಿ ದುರಂಹಕಾರದಿಂದ ಚೀನಾ ಫಿಲಿಫೈನ್ಸ್‌ ಹಡಗಿನ ಮೇಲೆ ದಾಳಿ ನಡೆಸಿತ್ತು. ನೀರು ಫ್ರೀಯಾಗಿ ಸಿಗುತ್ತೆ ಅಂತ ಚಿಕ್ಕ ಹಡಗಿನ ಮೇಲೆ ಜಲಫಿರಂಗಿ ಬಳಸಿ ಪುಂಡಾಟ ಮೆರೆದಿತ್ತು. ಇದು ಎರಡೂ ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಈಗ ಭಾರತ ಕೂಡ ರಿಯಾಕ್ಟ್‌ ಮಾಡಿದೆ. ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮಾತನಾಡಿ, ಚೀನಾಗೆ ಸ್ಟಾಂಗ್‌ ಮೆಸೇಜ್‌ ಕೊಟ್ಟಿದ್ದಾರೆ. ಜೈಶಂಕರ್‌ ಸದ್ಯ ಫಿಲಿಪೈನ್ಸ್‌ನಲ್ಲೇ ಇದ್ದಾರೆ. ಈ ವೇಳೆ ಫಿಲಿಪೈನ್ಸ್‌ ವಿದೇಶಾಂಗ ಕಾರ್ಯದರ್ಶಿ ಎನ್ರಿಕ್‌ ಮನಾಲೋ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ʻಫಿಲಿಪೈನ್ಸ್‌ ತನ್ನ ಸಾರ್ವಭೌಮತ್ವವನ್ನ ಎತ್ತಿ ಹಿಡಿಯೋದಕ್ಕೆ ಭಾರತ ಸಪೋರ್ಟ್‌ ಮಾಡುತ್ತೆ. ಆ ರೀತಿ ತನ್ನ ರಾಷ್ಟ್ರೀಯತೆಯನ್ನ ಎತ್ತಿ ಹಿಡಿಯೋ ಅಧಿಕಾರ ಪ್ರತಿಯೊಂದು ದೇಶಕ್ಕೂ ಇದೆ ಅಂತೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಬೇರೆ ದೇಶಗಳ ಸಾರ್ವಭೌಮತೆಗೆ ಧಕ್ಕೆ ತರೋ ಕೆಲಸಗಳನ್ನ ಮಾಡೋ ಚೀನಾಗೆ ಕಿವಿ ಹಿಂಡಿದ್ದಾರೆ. ಇನ್ನು ಬದಲಾಗ್ತಿರೋ ವಿದ್ಯಮಾನಗಳ ಮಧ್ಯೆ ಭಾರತ, ಫಿಲಿಪೈನ್ಸ್‌ನಂತ ದೇಶಗಳು ಕ್ಲೋಸಾಗಿ ಸಹಕಾರ ಹೊಂದಿರೋದು ಬಹಳ ಇಂಪಾರ್ಟೆಂಟ್‌ ಆಗುತ್ತೆ. ಉಭಯ ದೇಶಗಳ ನಡುವಿನ ನಂಬಿಕೆ ಹಾಗೂ ಕಂಫರ್ಟ್‌ ಜೋನ್‌ ಬಹಳ ವೇಗವಾಗಿ ಬೆಳೀತಿದೆ. ನಾವು ಹೊಸ ಕ್ಷೇತ್ರಗಳಲ್ಲಿ ಸಹಕಾರ ಜಾಸ್ತಿ ಮಾಡೋಕೆ ಎದುರು ನೋಡ್ತಿದ್ದೇವೆ. ಅದ್ರಲ್ಲೂ ಡಿಫೆನ್ಸ್‌ ಹಾಗೂ ಸೆಕ್ಯುರಿಟಿ ವಿಚಾರವಾಗಿ ಹೆಚ್ಚಿನ ಸಹಕಾರ ಬೆಳೆಸೋ ಬಗ್ಗೆ ಆಸಕ್ತಿ ಹೊಂದಿದ್ದೇವೆ ಅಂದಿದ್ದಾರೆ. ಇನ್ನು ಜೈಶಂಕರ್‌ ಈ ಮಾತಾಡ್ತಿದ್ದಂತೆ ಚೀನಾ ಹೊಟ್ಟೆಲಿ ಬೆಂಕಿ ಹತ್ತುಕೊಂಡಿದೆ. ಚೀನಾ ವಿದೇಶಾಂಗ ವಕ್ತಾರ ಲಿನ್‌ ಜಿಯಾನ್‌ ಇದಕ್ಕೆ ರಿಯಾಕ್ಟ್‌ ಮಾಡಿ, ʻಮರಿಟೈಮ್‌ ಅಂದ್ರೆ ಕಡಲ ವಿವಾದಗಳು ಆಯಾ ದೇಶಗಳಿಗೆ ಸಂಬಂಧಿಸಿದ ವಿಚಾರ. ಇದಕ್ಕೆ ಮೂರನೇ ವ್ಯಕ್ತಿ ಅಥವಾ ದೇಶ ಹಸ್ತಕ್ಷೇಪ ಮಾಡ್ಬಾರ್ದು. ದಕ್ಷಿಣ ಚೀನಾ ಸಮುದ್ರದ ಸತ್ಯ ಏನಿದೆಯೋ ಅದನ್ನ ಫಿಲಿಪೈನ್ಸ್‌ ಅರ್ಥ ಮಾಡ್ಕೋಬೇಕು. ಚೀನಾದ ಸಾರ್ವಭೌಮತೆ, ಮರಿಟೈಮ್‌ ಇಂಟ್ರಸ್ಟ್‌ಗೆ ರೆಸ್ಪೆಕ್ಟ್‌ ಕೊಡ್ಬೇಕು. ಈ ಭಾಗದ ಸ್ಥಳೀಯ ದೇಶಗಳು ಇಲ್ಲಿ ಶಾಂತಿ ಕಾಪಾಡೋಕೆ ಪ್ರಯತ್ನ ಪಡೋದನ್ನ ಗೌರವಿಸ್ಬೇಕು ಅಂತ ಪ್ರವಚನ ಕೊಟ್ಟಿದ್ದಾರೆ. ಆ ಮೂಲಕ ಫಿಲಿಫೈನ್ಸ್‌ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡ್ಬಾರ್ದು ಅಂತ ಭಾರತಕ್ಕೆ ಹೇಳಿದ್ದಾರೆ. ಅಂದ್ಹಾಗೆ ಲಂಕಾ, ಮಾಲ್ಡೀವ್ಸ್‌ನ್ನ ಬಳಸಿಕೊಂಡು ಭಾರತಕ್ಕೆ ಕಾಟ ಕೊಡ್ಬೇಕು ಅಂತಿರೋ ಚೀನಾದ ವಿರುದ್ದ ಭಾರತ ಕೂಡ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡ್ತಾ ಬರ್ತಿದೆ. ಈಗಾಗಲೇ ನಮ್ಮ ಬ್ರಮ್ಹೋಸ್‌ ಮಿಸೈಲ್‌ಗಳು ಫಿಲಿಪೈನ್ಸ್‌ನಲ್ಲಿ ಹೋಗಿ ಕೂತಿವೆ. HAL ತೇಜಸ್‌ ಮಾರಾಟಕ್ಕೆ ಮಾತುಕತೆ ನಡೀತಿದೆ. ಉಭಯ ದೇಶಗಳ ವ್ಯಾಪಾರ ಕೂಡ ಚೆನ್ನಾಗಿದೆ. ಹೀಗಾಗಿ ಚೀನಾ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿದೆ.

-masthmagaa.com

Contact Us for Advertisement

Leave a Reply