masthmagaa.com:

ಭಾರತ-ಚೀನಾ ನಡುವಿನ ಸಂಬಂಧ ಈಗ ಅಷ್ಟಕ್ಕಷ್ಟೇ. ಇದರ ನಡುವೆ ಭಾರತದ ಎರಡು ಸರಕು ಸಾಗಣೆ ಹಡಗುಗಳು ಚೀನಾದ ಬಂದುರುಗಳ ಸಮೀಪ ಕಳೆದ ಹಲವು ತಿಂಗಳಿನಿಂದ ನಿಂತಲ್ಲೇ ನಿಂತಿವೆ. ಹಡಗುಗಳಲ್ಲಿರುವ ಸರಕುಗಳನ್ನ ಇಳಿಸಿ ಭಾರತಕ್ಕೆ ವಾಪಸ್ ಬರೋಣ ಅಂದ್ರೆ ಕುತಂತ್ರಿ ಚೀನಾ ಬಿಡ್ತಿಲ್ಲ. ಯಾಕೆ ಅಂತ ಕೇಳಿದ್ರೆ ಕೊರೋನಾ ಅನ್ನೋ ಕಾರಣ ಕೊಡ್ತಿದೆ. ಈ ಸಂಬಂಧ ಭಾರತ ಹಲವು ಬಾರಿ ಮನವಿ ಮಾಡಿದೆ. ಆದ್ರೆ ಚೀನಾ ತಲೇನೇ ಕೆಡಿಸಿಕೊಳ್ತಿಲ್ಲ. ಇದೀಗ ಮತ್ತೊಮ್ಮೆ ಸಿಟ್ಟಾಗಿರುವ ಭಾರತ, ಹೀಗೆ ಸಿಕ್ಕಾಕಿಕೊಂಡಿರುವ ಹಡಗುಗಳಿಂದ ಸರಕುಗಳನ್ನ ಅನ್​ಲೋಡ್​ ಮಾಡಲು ಮತ್ತು ಹಡಗಿನಲ್ಲಿರುವ 39 ಸಿಬ್ಬಂದಿ ವಾಪಸ್​ ಕಳಿಸಲು ಶೀಘ್ರದಲ್ಲೇ ವ್ಯವಸ್ಥೆ ಮಾಡಿಕೊಡಬೇಕು ಅಂತ ಹೇಳಿದೆ. ಅಂದ್ಹಾಗೆ 23 ಸಿಬ್ಬಂದಿ ಇರುವ ಗ್ರೇಟ್ ಈಸ್ಟ್ರನ್ ಶಿಪ್ಪಿಂಗ್ ಕಂಪನಿಯ ‘MV Jag Anand’ ಹಡಗು ಜೂನ್​ 13ರಿಂದ ಚೀನಾದ ಹಿಬೆ ಪ್ರಾಂತ್ಯದ ಜಿಂಗ್​ಟಾಂಗ್​ ಬಳಿ ನಿಂತಿದೆ. ಹಾಗೇ, ‘MV Anastasia’ ಎಂಬ ಮತ್ತೊಂದು ಹಡಗು ಸೆಪ್ಟೆಂಬರ್ 20ರಿಂದ ಕಾಫೆಡಿಯನ್ ಎಂಬಲ್ಲಿ ನಿಂತಿದೆ. ಇದರಲ್ಲಿ 16 ಸಿಬ್ಬಂದಿ ಇದ್ದಾರೆ. ಎರಡೂ ಹಡಗುಗಳು ಸರಕನ್ನ ಅನ್​ಲೋಡ್​ ಮಾಡಲು ಕಾಯ್ತಾ ಇವೆ.

-masthmagaa.com

Contact Us for Advertisement

Leave a Reply