ಭಾರತ-ಫ್ರಾನ್ಸ್‌ ರಕ್ಷಣಾ ಕ್ಷೇತ್ರದ ಟೆಕ್ನಾಲಜಿಯ ಹಂಚಿಕೆಯಲ್ಲಿ ಮಹತ್ವದ ಒಪ್ಪಂದ?

masthmagaa.com:

ಯುಕ್ರೇನ್‌ ಯುದ್ಧದಲ್ಲಿ ಬ್ಯುಸಿಯಾಗಿರೋ ರಷ್ಯಾದಿಂದ ಭಾರತ ದೂರವಾಗ್ತಿದ್ದು, ಪಾಶ್ಚೀಮಾತ್ಯ ದೇಶಗಳ ಜೊತೆಗೆ ಸಂಬಂಧವನ್ನ ಗಟ್ಟಿಗೊಳಿಸ್ತಾ ಇದೆ. ಈಗ ಈ ಚರ್ಚೆಗೆ ಇಂಬು ಕೊಡುವಂತೆ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಭಾರತ ಫ್ರಾನ್ಸ್‌ ಜೊತೆಗೆ ಫೈಟರ್‌ ಜೆಟ್‌ ಎಂಜಿನ್‌ಗಳನ್ನ ಅಭಿವೃದ್ಧಿಪಡಿಸೋಕೆ ರೆಡಿಯಾಗಿದೆ. ಇತ್ತೀಚೆಗಷ್ಟೆ ಅಮೆರಿಕದಿಂದ ಸೆಮಿಕಂಡಕ್ಟರ್‌ ಡೆವಲಪ್‌ಮೆಂಟ್‌ ಹಾಗು ಇಂಜಿನ್‌ ಟೆಕ್ನಾಲಜಿ ಶೇರ್‌ ಮಾಡ್ಕೊ‍ಳ್ಳುವ ಒಪ್ಪಂದ ಆಗಿದ್ದು, ಇದೀಗ ಫ್ರಾನ್ಸ್‌ ಕೂಡ ರಕ್ಷಣಾ ಕ್ಷೇತ್ರದ ಅಭಿವೃದ್ಧಿಗೆ ಭಾರತದ ಜೊತೆಯಲ್ಲಿ ಕೈ ಜೋಡಿಸಲು ಮುಂದಾಗಿದೆ. ಭಾರತದ ಜೊತೆ advanced multi-role combat aircraft (AMCA) ಹಾಗೂ ಟ್ವಿನ್‌ ಎಂಜಿನ್‌ ಡೆಕ್‌ ಬೇಸ್ಡ್‌ ಯುದ್ಧ ವಿಮಾನಗಳ ಇಂಜಿನ್‌ ಅನ್ನ ಜಂಟಿಯಾಗಿ ಅಭಿವೃದ್ಧಿಪಡಿಸಿ ತಯಾರಿಸೋಕೆ ಫ್ರಾನ್ಸ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ ಅಂತ ತಿಳಿದು ಬಂದಿದೆ. ಈ ಕುರಿತು ಫ್ರಾನ್ಸ್‌ ಮೂಲದ ರಕ್ಷಣಾ ವಿಮಾನ ಕಂಪನಿ ಸಫ್ರಾನ್‌ ಕನ್ಫರ್ಮ್‌ ಮಾಡಿದೆ. ಇತ್ತೀಚೆಗೆ, DRDO ಮುಖ್ಯಸ್ಥ ಡಾ ಸಮೀರ್ ವಿ ಕಾಮತ್ ಅವ್ರು ಪ್ಯಾರಿಸ್ ಏರ್ ಶೋ 2023ರ ಟೈಮ್‌ನಲ್ಲಿ ಸಫ್ರಾನ್ ಇಂಜಿನ್ ಫ್ಯಾಕ್ಟರಿ ಮತ್ತು ಪ್ಯಾರಿಸ್ ಬಳಿಯ Research and development (R&D) ಕೇಂದ್ರಕ್ಕೆ ಭೇಟಿ ನೀಡಿದ್ದರು. ಅದ್ರ ಬೆನ್ನಲ್ಲೇ ಈ ಬೆಳವಣಿಗೆಯಾಗಿದ್ದು, ಇಂಜಿನ್‌ ಟೆಕ್ನಾಲಜಿ ಕುರಿತಂತೆ ರಕ್ಷಣಾ ಸಚಿವರು ಮತ್ತು NSA ನೇತೃತ್ವದಲ್ಲಿ ಫ್ರಾನ್ಸ್‌ ಜೊತೆ ಮಾತುಕತೆ ನಡೆಸಲಾಗ್ತಿದೆ ಅಂತ ತಿಳಿದು ಬಂದಿದೆ. ಇನ್ನು ಅತ್ತ ಸಫ್ರಾನ್‌ ಈಗಾಗಲೇ ಭಾರತದ ರಕ್ಷಣಾ ವಲಯದಲ್ಲಿ ಹಲವಾರು ರೀತಿಯಲ್ಲಿ ತೊಡಗಿಕೊಂಡಿದ್ದು, ಹೈದರಾಬಾದ್‌ನಲ್ಲಿ ಸಫ್ರಾನ್‌ ಘಟಕ ಆರಂಭವಾಗ್ತಾ ಇದೆ. ಇದ್ರಲ್ಲಿ A320 ಮತ್ತು ಬೋಯಿಂಗ್‌ 737 ವಿಮಾನದ ಎಂಜಿನ್‌ಗಳ ರಿಪೇರಿ ಮತ್ತು ಮೆಂಟೇನೆನ್ಸ್‌ ನಡೆಯುತ್ತೆ. ಇನ್ನು ಈಗಾಗಲೇ ಸಫ್ರಾನ್‌ ಎಂಜಿನ್‌ಗಳು HAL ಹೆಲಿಕಾಪ್ಟರ್‌ಗಳಲ್ಲಿ ಬಳಕೆಯಾಗ್ತಿದ್ದು, ಈಗ ಮಲ್ಟಿರೋಲ್‌ ಹೆಲಿಕಾಪ್ಟರ್‌ ಎಂಜಿನ್‌ ಅಭಿವೃದ್ಧಿಪಡಿಸೋಕೆ ಕೂಡ ಮಾತುಕತೆ ನಡೀತಿದೆ. ಅಂದ್ಹಾಗೆ ಫ್ರಾನ್ಸ್‌ನ ಬಾಸ್ಟಿಲ್‌ ಡೇ ಆಚರಣೆಯಲ್ಲಿ ಭಾಗವಹಿಸೋಕೆ ಪ್ರಧಾನಿ ಮೋದಿಯವರು ಜುಲೈ 13ರಂದು ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply