ವಾಟ್ಸಾಪ್​ ಪ್ರೈವೆಸಿ ಪಾಲಿಸಿ ಬಗ್ಗೆ ಹೇಳಿದ್ದೇನು?

masthmagaa.com:

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಐಟಿ ಇಲಾಖೆ ನೀಡಿದ್ದ ನೋಟಿಸ್​​ಗೆ ವಾಟ್ಸಾಪ್ ಪ್ರತಿಕ್ರಿಯಿಸಿದೆ. ನಾವು ಬಳಕೆದಾರರ ಪ್ರೈವೆಸಿಗೆ ಮೊದಲ ಆದ್ಯತೆ ನೀಡೋದಾಗಿ ತಿಳಿಸಿದೆ. ಜೊತೆಗೆ ವಾಟ್ಸಾಪ್​​ ಅಪ್​ಡೇಟ್ ಮಾಡೋದ್ರಿಂದ ಬಳಕೆದಾರರ ವೈಯಕ್ತಿಕ ಮೆಸೇಜ್​​ಗಳಿಗೆ ಸಂಬಂಧಿಸಿದ ಪ್ರೈವೆಸಿ ಪಾಲಿಸಿಯಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂತ ಹಳೇ ರಾಗ ಮುಂದುವರಿಸಿದೆ. ಮೇ 18ರಂದು ವಾಟ್ಸಾಪ್​​ಗೆ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಹೊಸ ಪಾಲಿಸಿಯನ್ನು ವಾಪಸ್ ಪಡೆಯುವಂತೆ ಆದೇಶಿಸಿತ್ತು. ಇಲ್ಲವಾದ್ರೆ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿತ್ತು. ಅಂದಹಾಗೆ ಭಾರತ ವಿಶ್ವದಲ್ಲೇ ಹೆಚ್ಚು ವಾಟ್ಸಾಪ್ ಬಳಕೆದಾರರನ್ನು ಹೊಂದಿರೋ ದೇಶವಾಗಿದೆ. ಜೊತೆಗೆ ದೇಶದಲ್ಲಿ 40 ಕೋಟಿ ವಾಟ್ಸಾಪ್ ಬಳಕೆದಾರರಿದ್ದು, ಸದ್ಯದಲ್ಲೇ 50 ಕೋಟಿಗೆ ರೀಚ್ ಆಗೋ ಪ್ಲಾನ್ ಹಾಕ್ಕೊಂಡಿದೆ ವಾಟ್ಸಾಪ್ ಸಂಸ್ಥೆ.

-masthmagaa.com

Contact Us for Advertisement

Leave a Reply