ಕಿವೀಸ್ ವಿರುದ್ಧ ಭಾರತ ವನಿತೆಯರಿಗೆ ರೋಚಕ ಗೆಲುವು, ಸೆಮೀಸ್​ ಪ್ರವೇಶ

ಮೆಲ್ಬೊರ್ನ್​: ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ 4 ರನ್​ಗಳ ರೋಚಕ ಗೆಲುವು ಸಾಧಿಸಿದ ಭಾರತ ವನಿತೆಯರ ತಂಡ ಸೆಮಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಶೆಫಾಲಿ ವರ್ಮಾ ಅವರ 46 ರನ್​ಗಳ ಸಹಾಯದಿಂದ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 133 ರನ್ ಗಳಿಸಿತು. ಟಾರ್ಗೆಟ್​ ಬೆನ್ನತ್ತಿದ ನ್ಯೂಜಿಲೆಂಡ್​ ಪರ ಅಮೇಲಿಯಾ ಕೆರ್​ ಏಕಾಂಗಿ ಹೋರಾಟ ನಡೆಸಿದ್ರು. 19 ಎಸೆತಗಳಲ್ಲಿ 34 ರನ್ ಬಾರಿಸಿ ಅಜೇಯರಾಗಿ ಉಳಿದ ಕೆರ್ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. ನ್ಯೂಜಿಲೆಂಡ್​ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತವಾಯ್ತು. ಕಿವೀಸ್ ವನಿತೆಯರನ್ನ 4 ರನ್​​ಗಳಿಂದ ಮಣಿಸಿದ ಭಾರತದ ವನಿತೆಯರು ಸೆಮೀಸ್​ಗೆ ಕ್ವಾಲಿಫೈ ಆದ್ರು.

Contact Us for Advertisement

Leave a Reply