ಯುಕ್ರೇನ್‌ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸೋಕೆ ನಾವು ರೆಡಿ ಎಂದ ಪ್ರಧಾನಿ ಮೋದಿ!

masthmagaa.com:

ಭಾರತ ಪ್ರವಾಸದಲ್ಲಿರೋ ಜರ್ಮನಿಯ ಚಾನ್ಸಲರ್‌ ಒಲಾಫ್‌ ಶೋಲ್ಜ್ ಅವ್ರು ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜಂಟಿ ಸುದ್ಧಿಗೋಷ್ಟಿಯಲ್ಲಿ ಮಾತಾಡಿದ ಮೋದಿ, ಭಾರತ ಮತ್ತು ಜರ್ಮನಿ ಪ್ರಜಾಪ್ರಭುತ್ವ ತತ್ವದ ಮೇಲೆ ಉತ್ತಮ ಸಂಬಂಧ ಹೊಂದಿವೆ ಅಂತ ಹೇಳಿದ್ದಾರೆ. ವ್ಯಾಪಾರ ವಿನಿಮಯ ಕ್ಷೇತ್ರದಲ್ಲಿ ಇತಿಹಾಸ ಹೊಂದಿದ್ದು, ಯುರೋಪ್‌ನಲ್ಲೇ ನಮಗೆ ಅತಿದೊಡ್ಡ ವ್ಯಾಪಾರ ಪಾಲುದಾರ ಅಂದ್ರೆ ಅದು ಜರ್ಮನಿ ಅಂತ ಮೋದಿ ಹೇಳಿದ್ದಾರೆ. ಇದೇ ವೇಳೆ ಒಲಾಫ್‌ ಜೊತೆಯಲ್ಲಿ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಜರ್ಮನಿಯು ಭಾರತದಲ್ಲಿ ಅತ್ಯಂತ ಪ್ರುಮುಖ ಹೂಡಿಕೆದಾರ ದೇಶವಾಗಿದೆ ಅಂತ ಮೋದಿ ಹೇಳಿದ್ದಾರೆ. ಇನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಯುಕ್ರೇನ್‌ ಯುದ್ಧ ನಿಲ್ಲಿಸೋಕೆ ಹಾಗೂ ಶಾಂತಿ ಸ್ಥಾಪಿಸೋಕೆ ನಾವು ರೆಡಿ ಇದೀವಿ ಅಂತ ಮೋದಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಯುಕ್ರೇನ್‌ ಯುದ್ದಕ್ಕೆ ಭಾರತ ಮಧ್ಯಸ್ಥಿಕೆ ವಹಿಸಬೇಕು ಅಂತ ಪದೇ ಪದೇ ಹೇಳ್ತಿರೋ ಹೊತ್ತಲ್ಲೇ ಮೋದಿಯವರ ಈ ಮಾತು ಸಾಕಷ್ಟು ಇಂಪಾರ್ಟೆಂಟ್ ಎನಿಸಿಕೊಂಡಿದೆ. ಈ ಕಡೆ ಜರ್ಮನಿ ಚಾನ್ಸಲರ್‌ ಒಲಾಫ್‌ ಮಾತನಾಡಿ, ಭಾರತ ಹಾಗೂ EU ನಡುವಿನ ಮುಕ್ತ ವ್ಯಾಪಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬದ್ಧವಾಗಿದ್ದಾರೆ. ಇದು ಅತ್ಯಂತ ಪ್ರಮುಖ ವಿಷಯವಾಗಿದ್ದು, ನಾನು ಇದ್ರಲ್ಲಿ ವೈಯಕ್ತಿವಾಗಿ ಇಂಟ್ರಸ್ಟ್‌ ತೋರಿಸಿ ಪಾಲ್ಗೊಳ್ತೀನಿ ಅಂತ ಒಲಾಫ್‌ ಹೇಳಿದ್ದಾರೆ. ಜೊತೆಗೆ ಭಾರತ ಮತ್ತು ಜರ್ಮನಿ ನಡುವೆ ಈಗಗಾಲೇ ಉತ್ತಮ ಸಂಬಂಧ ಇದೆ. ಅದನ್ನ ಇನ್ನಷ್ಟು ಹೆಚ್ಚಿಸೋಕೆ ನಾವು ರೆಡಿ ಇದೀವಿ. ಉಭಯ ದೇಶಗಳ ಅಭಿವೃದ್ಧಿ ಹಾಗೂ ಜಾಗತಿಕ ಶಾಂತಿಗಾಗಿ ಒಟ್ಟಿಗೆ ಕೆಲಸ ಮಾಡ್ತೀವಿ ಅಂತ ಒಲಾಫ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply