ಮಯನ್ಮಾರ್‌ನಿಂದ ತಕ್ಷಣವೇ ಜಾಗ ಖಾಲಿ ಮಾಡಿ ಬನ್ನಿ: ಭಾರತ!

masthmagaa.com:

‌ನೆರೆ ರಾಷ್ಟ್ರ ಮಯನ್ಮಾರ್‌ನಲ್ಲಿ 2022ರಿಂದ ಅಲ್ಲಿನ ಆಡಳಿತ ಮಿಲಿಟರಿ ಕಪಿಮುಷ್ಠಿಗೆ ಸಿಕ್ಕಾಗಿನಿಂದ ದಿನಬಿಡದೇ ಸಂಘರ್ಷ ಹಿಂಸಾಚಾರಗಳು ಜಾಸ್ತಿಯಾಗ್ತಿವೆ. ಸೇನಾ ಅಧಿಕಾರವನ್ನ ವಿರೋಧಿಸಿ ಅಲ್ಲಿನ ಬಂಡಾಯ ಗುಂಪುಗಳು ಮಯನ್ಮಾರ್‌ ಸೇನೆ ವಿರುದ್ಧ ಸಮರ ಸಾರ್ತಿವೆ. ಇತ್ತೀಚೆಗೆ ಈ ಗುಂಪುಗಳು ಸ್ಟ್ರಾಂಗ್‌ ಆಗಿದ್ದು ಹಿಂಸಾಚಾರ ಇನ್ನಷ್ಟು ಜಾಸ್ತಿ ಆಗ್ತಿದೆ. ಇದ್ರ ಬೆನ್ನಲ್ಲೇ ಪಕ್ಕದಲ್ಲಿರೋ ಭಾರತ ಅಲರ್ಟ್‌ ಆಗಿದೆ. ಮಯನ್ಮಾರ್‌ನ ರಖೈನ್‌ ರಾಜ್ಯದಲ್ಲಿರೋ ಭಾರತೀಯರಿಗೆ ತಕ್ಷಣವೇ ಅಲ್ಲಿಂದ ಹೊರಡಿ ಅಂತ ವಿದೇಶಾಂಗ ಸಚಿವಾಲಯ ಅಡ್ವಸರಿ ಬಿಡುಗಡೆ ಮಾಡಿದೆ. ಜೊತೆಗೆ ಭಾರತ-ಮಯನ್ಮಾರ್‌ ಸಂಪೂರ್ಣ ಗಡಿಗೆ ಬೇಲಿ ಹಾಕೋದಾಗಿ ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿದ್ದಾರೆ. ಮೊದಲು ಮಯನ್ಮಾರ್‌ ಸೇನೆ ಅಷ್ಟೇ ಸ್ಟ್ರಾಂಗ್‌ ಆಗಿತ್ತು. ಆದ್ರೀಗ ಬಂಡಾಯ ಗುಂಪುಗಳು ಕೂಡ ಸಮಬಲದಿಂದ ಹೋರಾಡ್ತಾ ಒಂದೊಂದೇ ಜಾಗ ವಶಪಡಿಸಿಕೊಳ್ತಾ ಇರೋದ್ರಿಂದ ಹಿಂಸಾಚಾರ ಹೆಚ್ಚಾಗಿದೆ. ಇದ್ರಿಂದ ಲಕ್ಷಾಂತರ ಜನರು ಮಯನ್ಮಾರ್‌ ಬಿಟ್ಟು ಪರಾರಿಯಾಗ್ತಿದ್ದಾರೆ. ಇವ್ರಿಗೆ ಪಕ್ಕದಲ್ಲೇ ಭಾರತ ಇರೋದ್ರಿಂದ ಗಡಿ ನುಸುಳೋದು ಸುಲಭ ಆಗುತ್ತೆ. ಆದ್ರಿಂದ ವಲಸೆ ಬರೋರನ್ನ ತಡೆಯೋಕೆ ಭಾರತ ಸರ್ಕಾರ ಈ ಬೇಲಿ ಪ್ಲಾನ್‌ ಹಾಕೊಂಡಿದೆ. ಅರುಣಾಚಲ ಪ್ರದೇಶ, ನಾಗಲ್ಯಾಂಡ್‌, ಮಣಿಪುರ ಮತ್ತು ಮಿಜೋರಾಂ ಗಡಿಭಾಗದಲ್ಲಿ ಸುಮಾರು 1,643 ಕಿಮೀ ಉದ್ದದ ಬೇಲಿ ಹಾಕಲಿದೆ. ಅಂದ್ರೆ ಹೆಚ್ಚೂ ಕಡಿಮೆ ಹೈದರಾಬಾದ್‌ನಿಂದ ದಿಲ್ಲಿವರೆಗೆ ಅಷ್ಟು ಉದ್ದದ ಬೇಲಿ…. ಇನ್ನು ಈ ನಿರ್ಧಾರದ ಮೂಲಕ ಭಾರತ-ಮಯನ್ಮಾರ್‌ ಮಧ್ಯೆ ಮಾಡಿದಂತ 6 ವರ್ಷಗಳ ಹಿಂದಿನ ಒಪ್ಪಂದವನ್ನೂ ಬ್ರೇಕ್‌ ಮಾಡಲಾಗಿದೆ. ಈ ಒಪ್ಪಂದದ ಪ್ರಕಾರ, ಭಾರತ ಮತ್ತು ಮಯನ್ಮಾರ್‌ ಗಡಿಭಾಗದಲ್ಲಿರೋರು ಯಾವ್ದೇ ವೀಸಾ ಇಲ್ದೇ ಪರಸ್ಪರ ದೇಶಗಳಿಗೆ 16 ಕಿಮೀ ಒಳಗೆ ಪ್ರಯಾಣಿಸೋಕೆ ಅನುಮತಿ ನೀಡಲಾಗಿತ್ತು. ಇನ್ನು ಭಾರತದೊಳಗೆ ಮಯನ್ಮಾರ್‌ ವಲಸಿಗರು ನುಗ್ತಾ ಇದ್ದಾರೆ ಅನ್ನೋದು ಮಾತ್ರ ಭಾರತದ ಕಳವಳವಲ್ಲ. ಜೊತೆಗೆ ಇವ್ರು ಭಾರತದಲ್ಲಿ ಜನಾಂಗೀಯ ಸಂಘರ್ಷಕ್ಕೆ ಕಾರಣ ಆಗ್ತಿದ್ದಾರೆ ಅನ್ನೋದು ಸರ್ಕಾರದ ವಾದ. ಪ್ರಮುಖವಾಗಿ ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕಳೆದ ವರ್ಷ ನಡೆದ ಜನಾಂಗೀಯ ಸಂಘರ್ಷವನ್ನ ಪ್ರಚೋದಿಸಿದ್ದೇ ಈ ಮಯನ್ಮಾರ್‌ನಿಂದ ಬಂದ ವಲಸಿಗರು ಅಂತ ಕೆಲವರು ಆರೋಪಿಸಿದ್ರು. ಆದ್ರಿಂದ ಈ ಎಲ್ಲ ಬೆಳವಣಿಗೆಗಳು ನಡೀತಿವೆ.

-masthmagaa.com

Contact Us for Advertisement

Leave a Reply