ಇಂದಿನಿಂದ ದೇಶದ ಮೊದಲ ಕೋವಿಡ್‌ ನೇಸಲ್‌ ಲಸಿಕೆ ಲಭ್ಯ!

masthmagaa.com:

ಭಾರತ್‌ ಬಯೋಟೆಕ್‌ ಕಂಪನಿ ಅಭಿವೃದ್ದಿ ಪಡಿಸಿರೊ ʻನೇಸಲ್‌ʼ ಅಂದ್ರೆ ಮೂಗಿನ ಮೂಲಕ ಹಾಕಲಾಗೋ ಕೋವಿಡ್‌ ಲಸಿಕೆಯನ್ನ ಬೂಸ್ಟರ್‌ ಡೋಸ್‌ ಆಗಿ ಬಳಕೆ ಮಾಡೋಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಇಂದಿನಿಂದ ಕೋವಿಡ್-19 ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗುತ್ತೆ ಅಂತ ಸರ್ಕಾರ ತಿಳಿಸಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ಮೂಗಿನ ಮೂಲಕ ಬಳಸಲಾಗ್ತಿರೊ ದೇಶದ ಮೊದಲ ಕೋವಿಡ್‌ ಲಸಿಕೆ ಇದಾಗಿದೆ. 2021ರ ಆಗಸ್ಟ್‌ನಲ್ಲಿ ಲಸಿಕೆಯ 2 ಹಾಗೂ 3ನೇ ಕ್ಲಿನಿಕಲ್‌ ಪ್ರಯೋಗ ನಡೆದಿತ್ತು.

-masthmagaa.com

Contact Us for Advertisement

Leave a Reply